ಕನಕಗಿರಿ ಕನಕಾಚಲ ದೇವಸ್ಥಾನದಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ಮಂಗಳವಾರ ಎಣಿಕೆ ಸಂದರ್ಭ ತಹಸೀಲ್ದಾರ್ ವಿಶ್ವನಾಥ ಮುರುಡಿ, ಪ್ರಮುಖರಾದ ಕೀರ್ತಿ ಸೋನಿ, ವೆಂಕೋಬ ಬೋವಿ ಸೇರಿ ಭಕ್ತರು ಪಾಲ್ಗೊಂಡಿದ್ದರು.
ಕನಕಗಿರಿ: ಇಲ್ಲಿನ ಕನಕಾಚಲ ದೇವಸ್ಥಾನದ ಕಾಣಿಕೆ ಪೆಟ್ಟಿಗೆಗಳನ್ನು ಮಂಗಳವಾರ ತಹಸೀಲ್ದಾರ್ ವಿಶ್ವನಾಥ ಮುರುಡಿ ನೇತೃತ್ವದಲ್ಲಿ ಎಣಿಕೆ ಮಾಡಲಾಗಿದ್ದು, ಒಟ್ಟು 5.62 ಲಕ್ಷ ರೂ. ಸಂಗ್ರಹವಾಗಿದೆ. 2025ರ ನ.12ರಂದು ಕಾಣಿಕೆ ಎಣಿಕೆ ನಡೆಸಲಾಗಿತ್ತು.
ಇದಾದ 75 ದಿನಗಳ ನಂತರ ಮಂಗಳವಾರ ಮತ್ತೆ ಪೆಟ್ಟಿಗೆಗಳನ್ನು ತೆರೆದು ಎಣಿಕೆ ಮಾಡಲಾಗಿದೆ. ಈ ವೇಳೆ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಕೋರಿ ದೇವರಿಗೆ ಪತ್ರ ಬರೆದು ಪೆಟ್ಟಿಗೆಯಲ್ಲಿ ಹಾಕಿರುವುದು ಕಂಡುಬಂತು.
ಸಂಗ್ರಹವಾದ ಮೊತ್ತವನ್ನು ಬ್ಯಾಂಕಿನಲ್ಲಿರುವ ದೇವಸ್ಥಾನದ ಖಾತೆಗೆ ಜಮಾ ಮಾಡಲಾಗಿದೆ. ಶಿರಸ್ತೇದಾರ್ ಅನಿತಾ ಇಂಡಿ, ಪ್ರಮುಖರಾದ ಕೀರ್ತಿ ಸೋನಿ, ವೆಂಕೋಬ ಬೋವಿ, ಚಂದ್ರೇಗೌಡ, ಕರಿಬಸಪ್ಪ ಉಡುಮಕಲ್, ಈಶಪ್ಪ ಸೂಳೇಕಲ್, ಪರಶುರಾಮ ಮತ್ತಿತರರು ಉಪಸ್ಥಿತರಿದ್ದರು.