545 ಪಿಎಸ್‌ಐ ನೇಮಕಾತಿ ಹಗರಣ; 110 ಆರೋಪಿಗಳಿಗೆ ಆಯೋಗ ನೋಟಿಸ್

veerappa
Published on

ಬೆಂಗಳೂರು: ಸಬ್‌ಇನ್‌ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿ ಹಗರಣ ಸಂಬಂಧ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ಆರೋಪಿತರು ಮತ್ತು ಸಿಐಡಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಪ್ರಕರಣದ ಸತ್ಯಾಂಶ ತಿಳಿಯಲು ರಾಜ್ಯ ಸರ್ಕಾರ ನ್ಯಾ.ಬಿ.ವೀರಪ್ಪ ಏಕಸದಸ್ಯ ವಿಚಾರಣಾ ಆಯೋಗ ರಚನೆ ಮಾಡಿದೆ. ವಿಚಾರಣೆ ಶುರು ಮಾಡಿರುವ ನ್ಯಾ.ಬಿ.ವೀರಪ್ಪ ಆಯೋಗ, ಈಗಾಗಲೆ ಸಿಐಡಿ ಅಧಿಕಾರಿಗಳಿಂದ ಹಗರಣದ ಸಂಬಂಧ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದೆ. ಬೆಂಗಳೂರು, ಕಲಬುರಗಿ ಸೇರಿ ವಿವಿಧೆಡೆ ದಾಖಲಾಗಿರುವ ಪ್ರಕರಣಗಳ ಪೈಕಿ 17 ಕೇಸಿನ ತನಿಖೆ ಪೂರ್ಣ ಮಾಡಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಉಳಿದಂತೆ ಒಂದು ಅಥವಾ ಎರಡು ಪ್ರಕರಣ ಬಾಕಿ ಇರುವ ಮಾಹಿತಿ ಇದೆ.

ಈಗಾಗಲೆ ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿದ್ದ ಅಭ್ಯರ್ಥಿಗಳು ಮತ್ತು ಪರೀಕ್ಷಾರ್ಥಿಗಳಿಂದ ಹಣ ಪಡೆದು ವಾಮಮಾರ್ಗದಲ್ಲಿ ಅನುಕೂಲ ಮಾಡಿಕೊಟ್ಟಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸೇರಿ 110 ಮಂದಿಗೆ ನೋಟಿಸ್ ಜಾರಿ ಮಾಡಿದೆ.

ನೋಟಿಸ್ ಸ್ವೀಕರಿಸಿದ ಏಳು ದಿನಗಳ ಒಳಗಾಗಿ ಆರೋಪಿತರು ಆಯೋಗದ ಮುಂದೆ ಬಂದು ತಮ್ಮ ಹೇಳಿಕೆ ದಾಖಲಿಸುವ ಮೂಲಕ ಸೂಕ್ತ ದಾಖಲೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಇವರಲ್ಲದೆ, ಹಗರಣದ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳಿಗೂ ಆಯೋಗ ನೋಟಿಸ್ ಜಾರಿ ಮಾಡಿದೆ. ತನಿಖಾಧಿಕಾರಿಗಳು ತಮ್ಮ ಕೇಸಿನ ಸಂಬಂಧ ದಾಖಲೆ ಪತ್ರ ಒದಗಿಸುವ ಮೂಲಕ ಅವರ ಹೇಳಿಕೆಯನ್ನು ಒಪ್ಪಿಸಬೇಕಾಗಿದೆ ಎಂದು ಆಯೋಗ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net