5096 ಕೋಟಿ ರೂ. ವೆಚ್ಚದ ಮದುವೆ!

ವಿಜಯವಾಣಿ (3)
Published on

ನವದೆಹಲಿ: ಗೆಳತಿ ಲಾರೆನ್ ಸ್ಯಾಂಚೆಜ್ ಜತೆ ಅದ್ದೂರಿಯಾಗಿ ಮದುವೆಯಾಗಲು ಅಮೆಜಾನ್ ಕಂಪನಿಯ ಸಂಸ್ಥಾಪಕ ಜೆಫ್ ಬೆಜೋಸ್ ಯೋಜಿಸಿದ್ದಾರೆ.

ಮುಂದಿನ ಶನಿವಾರ ಕೊಲರಾಡೋದಲ್ಲಿ ನಡೆಯಲಿರುವ ವಿವಾಹಕ್ಕೆ ತಗಲುವ ವೆಚ್ಚ 600 ದಶಲಕ್ಷ ಡಾಲರ್ (5,096 ಕೋಟಿ ರೂಪಾಯಿ) ಆಗಲಿದೆ. ತಮ್ಮ ವೈಭವೋಪೇತ ವಿವಾಹಕ್ಕೆ ಅತಿಥಿಗಳಾಗಿ ಆಗಮಿಸಲಿರುವ ಸುಮಾರು 180 ಅತಿಥಿಗಳಿಗೆ ಆತಿಥ್ಯ ಒದಗಿಸಲಿಕ್ಕೆಂದೇ ಬಿಜೋಸ್-ಸ್ಯಾಂಚೆಜ್ ಜೋಡಿ ಆಸ್ಪೆನ್​ನ ಮತ್ಸುಹಿಸಾ ಸುಷಿ ರೆಸ್ಟೋರೆಂಟ್​ಅನ್ನು ಇಡಿಯಾಗಿ ಬಾಡಿಗೆಗೆ ಪಡೆದಿದ್ದಾರೆ. ಬಿಲ್ ಗೇಟ್ಸ್, ಲಿಯೋ ನಾರ್ಡೆ ಡಿಕ್ಯಾಪ್ರಿಯೋ ಮತ್ತು ಜೋರ್ಡಾನ್ ರಾಣಿ ರನಿಯಾ ಮೊದಲಾ ದವರು ಬಿಲಿಯಾಧಿಪತಿ ಉದ್ಯಮಿಯ ಅತಿಥಿಗಳ ಪಟ್ಟಿಯಲ್ಲಿದ್ದಾರೆ.

ಆಸ್ಪೆನ್​ನ ಕೆವಿನ್ ಕೆವಿನ್ ಕಾಸ್ಟ್​ನರ್ಸ್ ಡನ್ಬಾರ್ ರಾಂಚ್​ನಲ್ಲಿ ಈ ಜೋಡಿ ಡಿಸೆಂಬರ್ 28ರಂದು ವೈವಹಿಕ ಜೀವನಕ್ಕೆ ಕಾಲಿಡಲಿ ದ್ದಾರೆ. ಈ ಜೋಡಿ ವಿವಾಹದ ವಿವರಗಳನ್ನು ಬಹಿರಂಗವಾಗಿ ದೃಢಪಡಿಸಿಲ್ಲವಾದರೂ ಇಬ್ಬರೂ ಬಹು ನಿರೀಕ್ಷಿತ ಮದುವೆಯ ತಯಾರಿಗಾಗಿ ವಾರಾಂತ್ಯ ಆಸ್ಪೆನ್​ಗೆ ಆಗಮಿಸಿದ್ದಾರೆಂದು ಅವರ ನಿಕಟ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net