ಭಾರತದಲ್ಲಿ 3577ಮಂದಿಗೆ ಕರೊನಾ ಸೋಂಕು; ಇದುವರೆಗೆ ಚಿಕಿತ್ಸೆ ಪಡೆದು ಡಿಸ್​ಚಾರ್ಜ್​ ಆದವರು 275 ಜನ

corona virus 18 mar 20
Published on

ನವದೆಹಲಿ: ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 3577ರಷ್ಟಾಗಿದೆ. ಭಾನುವಾರ ಸಂಜೆ ಆರೋಗ್ಯ ಇಲಾಖೆ ನೀಡಿದ ಅಂಕಿಅಂಶದ ಅನ್ವಯ, 24 ಗಂಟೆಗಳಲ್ಲಿ 505 ಪ್ರಕರಣ ಪತ್ತೆಯಾಗಿದೆ.

ಕರೊನಾ ವೈರಸ್​ನಿಂದ ಇದುವರೆಗೆ 83 ಮಂದಿ ಮೃತಪಟ್ಟಿದ್ದು, ಶುಕ್ರವಾರದವರೆಗೆ 275 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ.

ಶುಕ್ರವಾರ ಅತ್ಯಂತ ಹೆಚ್ಚು ಅಂದರೆ 601 ಕರೊನಾ ಪ್ರಕರಣಗಳು ಪತ್ತೆಯಾಗಿದ್ದವು. 12 ಮಂದಿ ಮೃತಪಟ್ಟಿದ್ದರು. 3500ಕ್ಕೂ ಹೆಚ್ಚು ಸೋಂಕಿತರಲ್ಲಿ 1000ಕ್ಕೂ ಅಧಿಕ ಮಂದಿ ನಿಜಾಮುದ್ದೀನ್​ ಮಸೀದಿಯಲ್ಲಿ ತಬ್ಲಿಘಿ ಜಮಾತ್​ ನಡೆಸಿದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು.

ದೇಶದಲ್ಲಿ ಸದ್ಯ ಮಹಾರಾಷ್ಟ್ರದಲ್ಲೇ ಅತ್ಯಂತ ಹೆಚ್ಚು ಕರೊನಾ ಸೋಂಕಿತರು ಇದ್ದಾರೆ. ಮುಂಬೈ, ಪುಣೆ, ನಾಗ್ಪುರ ಸೇರಿ ಬಹುತೇಕ ಎಲ್ಲ ಪ್ರದೇಶಗಳಲ್ಲೂ ಕರೊನಾ ಪ್ರಸರಣವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net