

ಚಿತ್ರದುರ್ಗ: ರಾಜ್ಯಸರ್ಕಾರ ಬಸವಣ್ಣ ಸಾಂಸ್ಕೃತಿಕ ನಾಯಕನೆಂದು ಘೋಷಿಸಿ ಒಂದು ವರ್ಷ ಸಂದಿರುವ ಈ ಸಂದರ್ಭದಲ್ಲಿ 500 ಕೋಟಿ ರೂ. ಮೊತ್ತದ ಬಸವಣ್ಣ ಸಾಂಸ್ಕೃತಿಕ ಯೋಜನೆ ಅನುಷ್ಠಾನಕ್ಕಾಗಿ ಚಿಂತನೆ ನಡೆಸಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಮುರುಘಾಮಠ ಅನುಭವ ಮಂಟಪದಲ್ಲಿ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ,ವರ್ಷಕ್ಕೆ 100 ಕೋಟಿ ರೂ.ಗಳಂತೆ 5 ವರ್ಷಗಳಲ್ಲಿ 500 ಕೋಟಿ ರೂ.ವೆಚ್ಚದ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ. ಇದಕ್ಕಾಗಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ,ಅರವಿಂದ ಜತ್ತಿ ಮತ್ತಿತರ ಮಹನೀಯರು,ಯೋಜನಾ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿ ಸಿದರೆ ಬಸವ ತತ್ವದಲ್ಲಿ ನಂಬಿಕೆ,ಬದ್ಧತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿತಾ ಸ್ಪಂದಿಸುತ್ತಾರೆ. ಈ ಬಜೆಟ್‌ನಲ್ಲಿ ಅನು ದಾನವನ್ನೂ ಕಾಯ್ದಿರಿಸಬಹುದು.
ಒಮ್ಮೆಗೆ 500 ಕೋಟಿ ರೂ.ಕೇಳುವುದು ಹೊರೆಯಾಗಲಿದೆ. ಯೋಜನೆಯಡಿ ಪ್ರತಿ ಜಿಲ್ಲೆಯಲ್ಲಿ ಬಸವಭವನ,ಬೆಂಗಳೂರಲ್ಲಿ ಬಸವ ಣ್ಣನ ಬೃಹತ್ ಪ್ರತಿಮೆ ನಿರ್ಮಾಣ,ರಾಜ್ಯ,ಹೊರ ರಾಜ್ಯಗಳಲ್ಲಿರುವ ಶರಣರ ಸ್ಮಾರಕಗಳ ರಕ್ಷಣೆ,ಅವುಗಳ ಸಮಗ್ರ ಅಭಿವೃದ್ಧಿ ಹಾಗೂ ವಚ ನ ವಿಶ್ವ ವಿದ್ಯಾಲಯದ ಸ್ಥಾಪನೆ ಯೋಜನೆಯಡಿ ಸೇರಿವೆ. ಇದರ ಅನುಷ್ಠಾನಕ್ಕೆ ಪೂಜ್ಯರು ಒತ್ತಾಯಿಸಿದ್ದಾರೆ. ಇದಕ್ಕೆ ಸುತ್ತೂರು ಶ್ರೀಗಳ ಮಾರ್ಗದರ್ಶನದ ಅಗತ್ಯವಿದೆ ಎಂದರು.
ಸಮ್ಮೇನಾಧ್ಯಕ್ಷರ ಭಾಷಣ ಮಾಡಿದ ಡಾ.ಸಿದ್ಧರಾಮ ಬೆಲ್ದಾಳ ಶರಣರು,ಶರಣರ ಸ್ವಾನುಭವಾವದಿಂದ ಹೊರಹೊಮ್ಮಿದ ವಚನಗಳೆಂ ಬ ಶರಣ ಸಾಹಿತ್ಯ ಸ್ವತಂತ್ರವಾದ್ದದಾಗಿದೆ. ಇದು ವೇದಾಗಮ ಮೂಲದ್ದಲ್ಲ,ಆಸ್ಥಾನ ವಿದ್ವಾಂಸರಿಂದರಿಂದ ರಚಿತವಾದದ್ದು ಅಲ್ಲ. ಈಸಾ ಹಿ ತ್ಯ ಮಾನವೀಯತೆಯನ್ನು ಒಳಗೊಂಡಿರುವ ಜಾಗತಿಕ ಮೌಲ್ಯಗಳಿಂದ ಕೂಡಿದೆ. ಜಾತಿ,ಮತ,ಪಂಥಕ್ಕೆ ಸಂಬಂಧಿಸದ,ಕಾಯಕ ಜೀವಿಗಳ ಈ ಸಾಹಿತ್ಯದ ಬೇರಿನಲ್ಲಿ ಸಾರ್ವತ್ರಿಕ,ಮಾನವ ಏಕತೆ,ಅಖಂಡತೆಯ ಮೂಲವಿದೆ ಎಂದರು.
ಬಾಲ್ಕಿ ಹಿರೇಮಠದ ಡಾ.ಶ್ರೀ ಬಸವಲಿಂಗಪಟ್ಟದ್ದೇವರು ಮಾತನಾಡಿ,ಬಸವಣ್ಣ ಚೈತನ್ಯಕ್ಕೆ ಮಹತ್ವ ಕೊಟ್ಟಿದ್ದರು. ಬಿ.ಎಸ್.ಯಡಿಯೂ ರಪ್ಪ ಅಧಿಕಾರಾವಧಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪದ ಅಭಿವೃದ್ಧಿಗೆ 600 ಕೋಟಿ ರೂ.ಬಿಡುಗಡೆ ಮಾಡಿದ್ದರು.ಕಾಮಗಾರಿ ಪ್ರ ಗತಿಯಲ್ಲಿದ್ದು, ಅದಕ್ಕೆ ಚೈತನ್ಯ ತುಂಬಲು ಅಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸ ಬೇಕು. ವಚನಗಳ ಆಶಯಗಳು ಸಂವಿಧಾನದಲ್ಲಿ ಅಳವ ಡಿಕೆಯಾಗಿವೆ. ಶರಣ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಬೇಕು,ಮೌಲ್ಯಯುತ ಶಿಕ್ಷಣಕ್ಕಾಗಿ ಶರಣ ಸಾಹಿತ್ಯವನ್ನು ಪಠ್ಯದಲ್ಲಿ ಅಳವಡಿಸ ಬೇಕಿದೆ ಎಂದರು.
ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,ಡಂಬಳ-ಗದಗ ಶ್ರೀ ತೋಂಟದಾರ್ಯ ಮಠದ ಡಾ.ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ,ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾ ಮೀಜಿ, ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ,ಭೋವಿಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮ ಸ್ವಾಮೀಜಿ,ಸಿದ್ದಯ್ಯನ ಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ,ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸಪಪ್ರಭು ಸ್ವಾಮೀಜಿ ಮತ್ತಿತರ ಪೂಜ್ಯರು ಸಾನ್ನಿಧ್ಯ ವಹಿ ಸಿ ದ್ದರು.
ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಎಸ್.ಆರ್.ಗುಂಜಾಳ,ನಾಡೋಜ ಗೊ.ರು.ಚನ್ನಬಸಪ್ಪ,ಮಾಜಿ ಸಚಿವ ಎಸ್.ಎನ್.ಪಾಟೀಲ್, ಅ ಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್,ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್,ಮುರುಘಾ ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ,ಸದಸ್ಯರಾದ ಡಾ.ಶ್ರೀ ಬಸವಕುಮಾರ ಸ್ವಾಮೀಜಿ,ಎಸ್.ಎನ್.ಚಂದ್ರಶೇಖರ್,ಎಂಎಲ್‌ಸಿ ಕೆ. ಎಸ್.ನವೀನ್,ಯೋಗ ಗುರು ಚನ್ನಬಸವಣ್ಣ ಮತ್ತಿತರ ಗಣ್ಯರು,ಹರಗುರು ಚರಮೂರ್ತಿಗಳಿದ್ದರು.
ಸಚಿವ ಪಾಟೀಲ್ ಅನುಭವ ಸಂಗಮ ಸ್ಮರಣ ಸಂಚಿಕೆ,ತೋಂಟದಾರ್ಯ ಶ್ರೀಗಳು ಶರಣ ದರ್ಶನ ಕೃತಿ,ಎಂಎಲ್‌ಸಿ ಕೆ.ಎಸ್.ನವೀ ನ್ ಕಲ್ಯಾಣಕ್ರಾಂತಿ ಹಾಗೂ ಬಣ್ಣದ ಬದುಕಿನ ಚಿನ್ನ ದಿನಗಳು ಕೃತಿಯನ್ನು ಬಾಲ್ಕಿ ಶ್ರೀಗಳು ಬಿಡುಗಡೆ ಮಾಡಿದರು. ಜಯದೇವ ಶ್ರೀಗಳ ಭಾವಚಿತ್ರ ಹಾಗೂ ಪಾಕೇಟ್ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.