

ಸೂರತ್: ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದಲ್ಲಿ ನಿಧಿ ಸಂಗ್ರಹ ಕೆಲಸ ಭರದಿಂದ ಸಾಗಿದೆ. ರಾಮ ಭಕ್ತರಲ್ಲದೇ ದೇಶದ ಪ್ರತಿ ಹಳ್ಳಿ, ನಗರ, ಪಟ್ಟಣಗಳಲ್ಲಿ ನಿಧಿ ಸಂಗ್ರಹ ಅಭಿಯಾನಕ್ಕೆ ಅನೇಕರು ಕೈ ಜೋಡಿಸುತ್ತಿದ್ದಾರೆ.
ಈ ನಿಧಿ ಸಮರ್ಪಣೆಯಲ್ಲಿ ಅನೇಕ ಜನ ಮುಂದೆ ಬಂದು ಉತ್ಸಾಹದಿಂದ ದೇಣಿಗೆ ನೀಡುತ್ತಿದ್ದಾರೆ. ಆದರೆ ಇಲ್ಲೊಬ್ಬ 11 ರ ಬಾಲೆ ರಾಮ ಮಂದಿರ ನಿಧಿ ಸಂಗ್ರಹಣೆಗೆ ಮಾಡಿದ ಕೆಲಸವನ್ನು ಕೇಳಿದರೇ ಚಕಿತರಾಗುತ್ತೀರಾ.
ಸೂರತ್ನ ಭವಿಕಾ ಎಂಬ ಬಾಲಕಿ ರಾಮ ಮಂದಿರ ಕಟ್ಟಲು 50 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾಳೆ. ಅರೆ ಈ ಬಾಲಕಿಗೆ ಅಷ್ಟೊಂದು ದುಡ್ಡು ಹೇಗೆ ಎಂದು ಕೇಳಿದರೆ ಖಂಡಿತ ರಾಮ ಭಕ್ತರಿಗೆ ಹೆಮ್ಮೆ ಆಗುತ್ತದೆ.
ಕಳೆದ ಒಂದು ವರ್ಷದಿಂದ ರಾಮಮಂದಿರ ನಿರ್ಮಾಣ ಕಾರ್ಯಗಳು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಮನ ಪರಮ ಭಕ್ತೆಯಾಗಿರುವ ಸೂರತ್ನ ಭವಿಕಾ ರಾಮ ಮಂದಿರ ನಿರ್ಮಿಸಲು ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ರಾಮಯಣವನ್ನು ಕೀರ್ತನೆಗಳ ಮೂಲಕ ಸಭೆ ಸಮಾರಂಭಗಳಲ್ಲಿ ಪ್ರಚುರ ಪಡಿಸಿ ಮಂದಿರ ನಿರ್ಮಾಣಕ್ಕೆ 50 ಲಕ್ಷ ರುಪಾಯಿ ಸಂಗ್ರಹಿಸಿದ್ದಾಳೆ.
ಭವಿಕಾ ಈಗಾಗಲೇ ಈ ಹಣವನ್ನು ರಾಮಮಂದಿರ ಟ್ರಸ್ಟ್ಗೆ ಹಸ್ತಾಂತರಿಸಿದ್ದಾಳೆ. ಕಳೆದ ಮೇ ತಿಂಗಳಿನಿಂದ ಇದಕ್ಕಾಗಿ ಸಿದ್ದತೆ ಮಾಡಿಕೊಂಡು ಲಾಕ್ಡೌನ್ ಅಂತ್ಯಗೊಂಡ ನಂತರ ಗುಜರಾತ್ನ ಅನೇಕ ನಗರ ಪಟ್ಟಣಗಳಲ್ಲಿ ರಾಮಾಯಣದ ರಾಮ ಕೀರ್ತನೆಗಳ ಸಮಾರಂಭವನ್ನು ಆಯೋಜಿಸಿ, ಮಂದಿರಕ್ಕಾಗಿ ನಿಧಿ ಸಂಗ್ರಹಿಸಿದ್ದಾಳೆ. ಇನ್ನು ಕೂಡ ಅನೇಕ ಕಾರ್ಯಕ್ರಮಗಳನ್ನು ಆಯೋಜಿ, ಮತ್ತಷ್ಟು ನಿಧಿ ಸಂಗ್ರಹಿಸುವ ಅಭಿಪಾಷೆಯನ್ನು ಭವಿಕಾ ಹೊಂದಿದ್ದಾಳೆ. ಭವಿಕಾಳ ಈ ಕೆಲಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. (ಏಜೇನ್ಸಿಸ್)