ʻಮೋದಿ ಜೀ..ಬೆಂಗಳೂರಿನ ರಸ್ತೆಗಳು ಸರಿಯಿಲ್ಲ, ಟ್ರಾಫಿಕ್‌ ಜಾಸ್ತಿʼಕೈಬರಹದಲ್ಲೇ ಪತ್ರ ಬರೆದ 5 ವರ್ಷದ ಬಾಲಕಿ ಯಾರು ಗೊತ್ತಾ? Bengaluru Traffic

Heartfelt Letter To PM Modi On Bengaluru
Published on

Bengaluru Traffic :  ಐದು ವರ್ಷದ  ಬಾಲಕಿಯೊಬ್ಬಳು ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳನ್ನು ಉದ್ದೇಶಿಸಿ  ಪ್ರಧಾನಿ ನರೇಂದ್ರ ಮೋದಿಯವರಿಗೆ  ಕೈಬರಹದ ಪತ್ರವನ್ನು ಬರೆದಿದ್ದಾಳೆ. ಈ ಪತ್ರ  ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಬಾಲಕಿ ಮೋದಿಗೆ ಬರೆದ ಪತ್ರದಲ್ಲೇನಿದೆ?

‘ನರೇಂದ್ರ ಮೋದಿ ಜೀ, ಬೆಂಗಳೂರಿನಲ್ಲಿ ವಿಪರೀತ ಟ್ರಾಫಿಕ್ ಇದ್ದು ನಾವು ಶಾಲೆ ಹಾಗೂ ಕಚೇರಿಗಳಿಗೆ ತಡವಾಗಿ ತಲುಪುತ್ತಿದ್ದೇವೆ. ರಸ್ತೆ ತುಂಬಾ ಕೆಟ್ಟದಾಗಿದೆ. ದಯಮಾಡಿ ಸಹಾಯ ಮಾಡಿ’ ಎಂದು ಮೋದಿಗೆ ಬರೆದ ಪತ್ರದಲ್ಲಿ ಬಾಲಕಿ ಆರ್ಯ ಉಲ್ಲೇಖಿಸಿದ್ದಾಳೆ.

‘ಪ್ರಧಾನಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ನನ್ನ 5 ವರ್ಷದ ಮಗಳು ಇದನ್ನು ಟ್ರಾಫಿಕ್ ಸಮಸ್ಯೆ ಪರಿಹರಿಸುವ ಅವಕಾಶವೆಂದು ಭಾವಿಸಿದ್ದಾಳೆ’ ಎಂದು ಅಭಿರೂಪ್ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿ ಪತ್ರವನ್ನು ಹಂಚಿಕೊಂಡಿದ್ದಾಳೆ.

ಪುಟಾಣಿಯ ಕೈಬರಹದ ಪತ್ರವು ಸಾರ್ವಜನಿಕರ ಗಮನ ಸೆಳೆದಿದ್ದು, ಆನ್‌ಲೈನ್‌ನಲ್ಲಿ ಸಹಾನುಭೂತಿಯ ಅಲೆ ಹೊಮ್ಮಿದೆ. ಆರ್ಯ ಮೋದಿಗೆ ಬರೆದ ಪತ್ರಕ್ಕೆ ಒಬ್ಬರು ಪ್ರತಿಕ್ರಿಯಿಸಿ, ಐದು ವರ್ಷದ ಬಾಲಕಿಯ ಆಸೆ ಈಡೇರುತ್ತದೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ಮೋದಿಗೆ ಪತ್ರ ಬರೆದ ಈ ಬಾಲಕಿ ಯಾರು ಗೊತ್ತಾ?

ಬೆಂಗಳೂರಿನ ನಿವಾಸಿ ಅಭಿರೂಪ್ ಅವರ ಮಗಳು ಆರ್ಯ.   ಈ ಐದು ವರ್ಷದ ಬಾಲಕಿ ಪ್ರಧಾನಿ ಅವರಿಗೆ ಈ ಪತ್ರ ಬರೆದಿದ್ದಾಳೆ. ಆರ್ಯಳ ಪತ್ರ ಸಾರ್ವಜನಿಕರ ಗಮನ ಸೆಳೆದಿದೆ. ಆನ್‌ಲೈನ್‌ನಲ್ಲಿ ಅನೇಕರು ಆಕೆಗೆ ಬೆಂಬಲ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net