

Travel: ಕಡಲ ತೀರಗಳಿಗೆ ಹೋಗಿ ಶಾಂತಿಯನ್ನು ಬಯಸುವವರಿಗೆ ಸೆಪ್ಟೆಂಬರ್ ತಿಂಗಳು ಸೂಕ್ತವಾದ ಸಮಯ. ಮಳೆಗಾಲ ಮುಗಿದು ಹಸಿರು ತುಂಬಿದ ಪರ್ವತಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಹಾಗೆಯೇ ಈ ಸಮಯದಲ್ಲಿ ಈ ಪರ್ವತಗಳು ತಂಪಾದ ಗಾಳಿ ಮತ್ತು ಮಂಜಿನಿಂದ ಕೂಡಿದ ದೃಶ್ಯಗಳು ಹಾಗೂ ಶಾಂತಿಯ ಅನುಭವವನ್ನು ನೀಡುತ್ತವೆ.
ಈ ಗಿರಿಧಾಮಗಳು ಕಡಲ ತೀರದ ತೇವಾಂಶವನ್ನು ದೂರ ಮಾಡಿ ,ಪ್ರಕೃತಿಯ ಮಡಿಲಿನಲ್ಲಿ ವಿಶ್ರಾಂತಿಯನ್ನು ಒದಗಿಸುತ್ತವೆ. ಅಂದಹಾಗೇ, ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ನೀವು ಹೋಗಬಹುದಾದ ಪರ್ವತಗಳ ಬಗ್ಗೆ ತಿಳಿಸಲಾಗಿದೆ..
ಕೇರಳದ ಪಶ್ಚಿಮ ಘಟ್ಟಗಳಲ್ಲಿರುವ ಮುನ್ನಾರ್, ತನ್ನ ಚಹಾ ತೋಟಗಳು ಮತ್ತು ಮಂಜಿನಿಂದ ಕೂಡಿದ ಬೆಟ್ಟಗಳಿಗೆ ಹೆಸರುವಾಸಿಯಾಗಿದೆ. ಇದು ಸೆಪ್ಟೆಂಬರ್‌ನಲ್ಲಿ, ಮಳೆಯ ನಂತರ ಈ ಪ್ರದೇಶವು ಹಸಿರಿನಿಂದ ಕಂಗೊಳಿಸುತ್ತದೆ. ಎರಾವಿಕುಲಂ ರಾಷ್ಟ್ರೀಯ ಉದ್ಯಾನವನದಲ್ಲಿ ನೀಲಗಿರಿ ತಹರ್‌ನನ್ನು ಕಾಣಬಹುದು. ಹಾಗೂ ಮಟ್ಟುಪೆಟ್ಟಿ ಡ್ಯಾಮ್‌ನಲ್ಲಿ ದೋಣಿ ವಿಹಾರವು ಶಾಂತಿಯ ಅನುಭವವನ್ನು ನೀಡುತ್ತದೆ. ಇನ್ನು ತಾಜಾ ಚಹಾದ ಸುಗಂಧ ಮತ್ತು ತಂಪಾದ ವಾತಾವರಣವು ಕಡಲತೀರದ ಶಾಖದಿಂದ ಪರಿಹಾರವನ್ನು ಒದಗಿಸುತ್ತದೆ. ಪ್ರವಾಸಕ್ಕೆಂದು ಹೋದವರಿಗೆ ವಿಶ್ರಾಂತಿಯನ್ನು ನೀಡುವ ತಾಣವಾಗಿದೆ.
ಗಿರಿಧಾಮಗಳ ರಾಣಿ ಎಂದು ಕರೆಯಲ್ಪಡುವ ಕೊಡೈಕಾನಾಲ್, ಈ ತಿಂಗಳಲ್ಲಿ ತನ್ನ ಹಸಿರು ಕಾಡುಗಳು ಮತ್ತು ಸರೋವರಗಳಿಂದ ಆಕರ್ಷಿಸುತ್ತದೆ. ಕೊಡೈಕಾನಾಲ್ ಸರೋವರದಲ್ಲಿ ದೋಣಿ ವಿಹಾರ, ಕೋಕರ್ಸ್ ವಾಕ್‌ನಲ್ಲಿ ನಡಿಗೆ, ಮತ್ತು ಸಿಲ್ವರ್ ಕ್ಯಾಸ್ಕೇಡ್ ಜಲಪಾತವು ಪ್ರಕೃತಿಯ ಸೌಂದರ್ಯವನ್ನು ಒಡಮೂಡಿಸುತ್ತವೆ. ಈ ಗಿರಿಧಾಮವು ಶಾಂತತೆಯನ್ನು ಬಯಸುವವರಿಗೆ ಸೂಕ್ತವಾಗಿದೆ. ಇನ್ನು ಈ ಪ್ರದೇಶಗಳು ಸುಂದರವಾದ ಹಸಿರನ್ನು ಹಾಗೂ ತಂಪಾದ ಗಾಳಿಯನ್ನು ಸೂಸಿ ಪ್ರವಾಸಿಗರನ್ನು ಸೆಳೆಯುತ್ತದೆ.
ನೀಲಗಿರಿ ಬೆಟ್ಟಗಳಲ್ಲಿರುವ ಊಟಿಯು ತನ್ನ ಶೀತಲ ವಾತಾವರಣ ಮತ್ತು ವಸಾಹತು ಯುಗದ ಆಕರ್ಷಣೆಗೆ ಹೆಸರುವಾಸಿಯಾಗಿದೆ. ಸೆಪ್ಟೆಂಬರ್‌ನಲ್ಲಿ, ಊಟಿ ಸರೋವರದಲ್ಲಿ ದೋಣಿ ವಿಹಾರ ಮತ್ತು ನೀಲಗಿರಿ ಮೌಂಟೇನ್ ರೈಲ್ವೇಯ ಒಂದು ಪ್ರವಾಸವು ಮರೆಯಲಾಗದ ಅನುಭವವನ್ನು ನೀಡುತ್ತದೆ. ದೊಡ್ಡಬೆಟ್ಟ ಶಿಖರದಿಂದ ಕಾಣುವ ದೃಶ್ಯವು ಕಡಲತೀರದ ಏಕತಾನತೆಯಿಂದ ವಿಶ್ರಾಂತಿಯನ್ನು ಒದಗಿಸುತ್ತದೆ.
ಹಿಮಾಲಯದ ತಪ್ಪಲಿನಲ್ಲಿರುವ ಮನಾಲಿಯು ಸಾಹಸಿಕ ಮತ್ತು ಶಾಂತತೆಯನ್ನು ಬಯಸುವವರಿಗೆ ಸೂಕ್ತವಾದ ಸ್ಥಳವಾಗಿದೆ. ಇದು ಸೆಪ್ಟೆಂಬರ್‌ನಲ್ಲಿ, ಬಿಯಾಸ್ ನದಿಯ ದಡದಲ್ಲಿ ವಿಹಾರ, ಹಿಡಿಂಬಾ ದೇವಿಯ ದೇವಾಲಯ ಮತ್ತು ಸೋಲಾಂಗ್ ವ್ಯಾಲಿಯಲ್ಲಿ ಪ್ಯಾರಾಗ್ಲೈಡಿಂಗ್‌ನಂತಹ ಚಟುವಟಿಕೆಗಳು ಜನಪ್ರಿಯವಾಗಿವೆ. ಈ ಗಿರಿಧಾಮವು ಕಡಲತೀರದ ಶಾಖದಿಂದ ತಪ್ಪಿಸಿಕೊಳ್ಳಲು ತಂಪಾದ ವಾತಾವರಣವನ್ನು ನೀಡುತ್ತದೆ.
ಕಾಂಚನ ಜಂಗಾದ ದೃಶ್ಯಗಳಿಗೆ ಹೆಸರಾದ ಡಾರ್ಜಿಲಿಂಗ್, ತನ್ನ ಚಹಾ ತೋಟಗಳು ಮತ್ತು ಯುನೆಸ್ಕೋ ಪರಂಪರೆಯ ರೈಲಿನಿಂದ ಆಕರ್ಷಿಸುತ್ತದೆ. ಸೆಪ್ಟೆಂಬರ್‌ನಲ್ಲಿ, ಟೈಗರ್ ಹಿಲ್‌ನಿಂದ ಸೂರ್ಯೋದಯವನ್ನು ವೀಕ್ಷಿಸುವುದು ಮತ್ತು ಶಾಂತಿಯ ಪ್ರದೇಶಗಳಿಗೆ ಭೇಟಿ ನೀಡುವುದರಿಂದ ಶಾಂತತೆಯನ್ನು ಒದಗಿಸುತ್ತದೆ.
ಈ ಗಿರಿಧಾಮಗಳು ಕಡಲತೀರದ ಶಾಖ ಮತ್ತು ತೇವಾಂಶದಿಂದ ದೂರವಿರುವ, ತಂಪಾದ, ಹಸಿರಿನಿಂದ ಕೂಡಿದ ವಾತಾವರಣವನ್ನು ಒದಗಿಸುವುದರೊಂದಿಗೆ ಪ್ರವಾಸಿಗರನ್ನು ಸೆಲೆಯುತ್ತವೆ. ಹಾಗೇ ಸೆಪ್ಟೆಂಬರ್‌ನಲ್ಲಿ ಈ ಸ್ಥಳಗಳು ಕಡಿಮೆ ಜನದಟ್ಟಣೆಯಿಂದಾಗಿ ಶಾಂತಿಯನ್ನು ನೀಡುತ್ತವೆ. ಪ್ರಕೃತಿಯೊಂದಿಗೆ ಒಡನಾಟವನ್ನು ಸೃಷ್ಟಿಸುತ್ತವೆ. (ಏಜೆನ್ಸೀಸ್)