ಭಾರೀ ಮಳೆ; ನೀರಲ್ಲಿ ಕೊಚ್ಚಿಹೋದ 5 ಜನ ವಾಪಸ್​​ ಬರಲೇ ಇಲ್ಲ!

rain
Published on

ಉತ್ತರಪ್ರದೇಶ: ಭಾರೀ ಆಲಿಕಲ್ಲು ಮಳೆಯಿಂದಾಗಿ ನೀರಲ್ಲಿ ಕೊಚ್ಚಿ ಹೋಗಿ ನಾಲ್ವರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಸೋನಭದ್ರಾದಲ್ಲಿ ನಡೆದಿದೆ.

ಮೃತರನ್ನು ಗೀತಾದೇವಿ, ಸಂತ್ರಾ, ರಾಜಕುಮಾರಿ, ಯಶೋದಿಯಾ ಮತ್ತು ರಾಜಪತಿ ಎಂದು ಗುರುತಿಸಲಾಗಿದೆ. ಭಾರೀ ಆಲಿಕಲ್ಲು ಮಳೆಯಿಂದಾಗಿ ನೀರಲ್ಲಿ ಕೊಚ್ಚಿ ಹೋಗಿ ಈ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ಶುಕ್ರವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ.

ನಾಲ್ವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಆರು ಜನರು ಶುಕ್ರವಾರ ಸಂಜೆ ವೇಳೆ ಮನೆಯಿಂದ ಹೊರಗೆ ಹೋಗಿದ್ದರು. ಮನೆಗೆ ಮರಳಿ ಬರದೆ ಇರುವುದನ್ನು ಅರಿತ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಶನಿವಾರ ಮುಂಜಾನೆ ನದಿಯ ದಡದಲ್ಲಿ ಮೂರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಶವವನ್ನು ರಾಂಪುರ ಬಾರ್ಕೋನಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆ ಮಾಡಲಾಗಿದೆ.

ಗಾರ್ಹ್ವಾ ಗ್ರಾಮದ 4 ಮಹಿಳೆಯರು ಮತ್ತು ಇಬ್ಬರು ಮಕ್ಕಳು ಭಾರೀ ಮಳೆ ಸುರಿದಾಗ ಕಟ್ಟಿಗೆ ಸಂಗ್ರಹಿಸಲು ಹೋಗಿದ್ದಾರೆ. ಈ ಸಮಯದಲ್ಲಿ ಪರ್ವತಗಳಿಂದ ಬಂದ ಭಾರಿ ಪ್ರಮಾಣದ ಆಲಿಕಲ್ಲು ಮಳೆಯ ನೀರು ಇವರನ್ನು ಕೊಚ್ಚಿಕೊಂಡು ಹೋಗಿದೆ. ತನಿಖೆ ನಡೆಸಲಾಗಿದೆ ಎಂದು ಪೊಲೀಸ್​​ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net