ಭಾರತ-ಪಾಕ್​ ಯುದ್ಧದಲ್ಲಿ 5 ಜೆಟ್​ಗಳನ್ನು ಹೊಡೆದುರುಳಿಸಲಾಗಿತ್ತು; ನಾನೇ ಯುದ್ಧ ನಿಲ್ಲಿಸಿದೆ: ಡೊನಾಲ್ಡ್ ಟ್ರಂಪ್​ | India-Pakistan war

Untitled design (30)
Published on

India-Pakistan War: ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆ ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ನಡೆದ ಸಂಘರ್ಷದಲ್ಲಿ "ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಪುನರುಚ್ಚರಿಸಿದ್ದಾರೆ.

'ಭಾರತ-ಪಾಕ್​ ಯುದ್ಧ' ನಿಲ್ಲಿಸಿದ್ದು ನಾನೇ ಎಂದು ಪುನರಾವರ್ತಿಸುತ್ತಿರುವ ಟ್ರಂಪ್​, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ 5 ಜೆಟ್​ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಅಂಥ ಯುದ್ಧವನ್ನು ನಾನು ವ್ಯಾಪಾರ ಸಂಬಂಧಿತ ಬೆದರಿಕೆ ಹಾಕಿ ನಿಲ್ಲಿಸಿದೆ ಎಂದಿದ್ದಾರೆ.

ಶ್ವೇತಭವನದಲ್ಲಿ ರಿಪಬ್ಲಿಕನ್ ಶಾಸಕರೊಂದಿಗೆ ಖಾಸಗಿ ಭೋಜನಕೂಟದಲ್ಲಿ ಮಾತನಾಡಿದ ಟ್ರಂಪ್​, ಹೊಡೆದುರುಳಿಸಲಾಗಿದ್ದ 5 ಜೆಟ್​​ಗಳು ಭಾರತದ್ದೋ ಅಥವಾ ಪಾಕಿಸ್ತಾನದ್ದೋ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಟ್ರಂಪ್​ ಹೇಳಿದ್ದೇನು..?

''ಭಾರತ-ಪಾಕ್​ ಯುದ್ಧದ ಸಮಯದಲ್ಲಿ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂಬ ಮಾಹಿತಿ ನನಗಿದೆ. ಎರಡೂ ದೇಶಗಳು ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಹೊಂದಿವೆ. ಅವರು ಪರಸ್ಪರ ದಾಳಿ ಮಾಡುತ್ತಿದ್ದಾರೆ. ಅವರು ಎರಡು ದೇಶಗಳ ನಡುವೆ ಮಧ್ಯಪ್ರವೇಶಿಸಿ ಯುದ್ಧವನ್ನು ನಿಲ್ಲಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಹದಗೆಡುತ್ತಿರುವಾಗ, ವ್ಯಾಪಾರದ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗಿದೆ'' ಎಂದಿದ್ದಾರೆ.

ಭಾರತ ಹೇಳಿದ್ದೇನು..?

ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದಕ್ಕೆ ಕೀರ್ತಿ ಪಡೆಯುತ್ತಿರುವ ಟ್ರಂಪ್, ತಮ್ಮ ಮನಸ್ಸನ್ನು ಬದಲಾಯಿಸುತ್ತಿಲ್ಲ. ಟ್ರಂಪ್ ಅವರ ಹೇಳಿಕೆಗಳಿಗೆ ಈ ಹಿಂದೆ ತೀವ್ರವಾಗಿ ಪ್ರತಿಕ್ರಿಯಿಸಿದ್ದ ಭಾರತದ ಪ್ರಧಾನಿ ಮೋದಿ, ಈ ವಿಷಯದಲ್ಲಿ ಅಮೆರಿಕದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದು ಎರಡೂ ದೇಶಗಳ ಸೇನೆಗಳ ನಡುವಿನ ಚರ್ಚೆಯ ನಂತರ ತೆಗೆದುಕೊಂಡ ನಿರ್ಧಾರ ಮತ್ತು ಯಾವುದೇ ಮಧ್ಯವರ್ತಿ ಇಲ್ಲ. ಈ ಬಗ್ಗೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಮೂಲಕ ತಿಳಿಸಿರುವುದಾಗಿ ಮೋದಿ ಸ್ಪಷ್ಟಪಡಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net