ಶ್ರೀಮಲೆ ಮಹದೇಶ್ವರ ಬೆಟ್ಟದಲ್ಲಿ 5 ದಿನಗಳು ನಡೆದ ದೀಪಾವಳಿ ಉತ್ಸವ; ಒಟ್ಟು ಆದಾಯ ಸಂಗ್ರಹ ಎಷ್ಟು ಕೋಟಿ ರೂ. ಗೊತ್ತೇ?

ವಿಜಯವಾಣಿ (16)
Published on

ಹನೂರು: ತಾಲೂಕಿನ ಪ್ರಸಿದ್ಧ ಧಾರ್ವಿುಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ 5 ದಿನಗಳ ಕಾಲ ನಡೆದ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ವಿವಿಧ ಸೇವೆಗಳು, ಉತ್ಸವಗಳು, ಲಾಡು ಮಾರಾಟ ಹಾಗೂ ಇತರ ಸೇವಾ ಮೂಲಗಳಿಂದ ಒಟ್ಟು 2.43 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಮಹದೇಶ್ವರ ಬೆಟ್ಟದಲ್ಲಿ ಅ.2 ರಿಂದ ನ.2 ರವರೆಗೆ ದೀಪಾವಳಿ ಜಾತ್ರೆ ಜರುಗಿದ್ದು, ತಮಿಳುನಾಡು ಸೇರಿದಂತೆ ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ, ಚಾ.ನಗರ ಇತರ ಕಡೆಗಳಿಂದ 4 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರು.

ಈ 5 ದಿನದ ಅವಧಿಯಲ್ಲಿ ಹುಲಿವಾಹನ, ರುದ್ರಾಕ್ಷಿ ವಾಹನ, ಚಿನ್ನ ಹಾಗೂ ಬೆಳ್ಳಿ ತೇರಿನ ಉತ್ಸವಗಳು, ಪಂಚಕಳಸ ಸಮೇತ ನವರತ್ನ ಕಿರೀಟ ಧಾರಣೆ, ಏಕವಾರು ರುದ್ರಾಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ಮೊದಲಾದ ಸೇವೆಗಳು ಜರುಗಿದ್ದು, ಭಕ್ತರು ಭಾಗಿಯಾಗಿದ್ದರು. ಜತೆಗೆ ಲಾಡು, ತೀರ್ಥ, ಮಿಶ್ರ ಪ್ರಸಾದ, ಕಲ್ಲು ಸಕ್ಕರೆ, ಬ್ಯಾಗ್ ಮಾರಾಟ, ಅಕ್ಕಿಸೇವೆ, ವಿಶೇಷ ಪ್ರವೇಶ ಶುಲ್ಕ, ಪುದುವಟ್ಟು ಠೇವಣಿ ಇತರ ಸೇವಾ ಮೂಲಗಳಿಂದ ಒಟ್ಟು 2,43,56,436 ರೂ. ಆದಾಯ ಸಂಗ್ರಹವಾಗಿದೆ.

ಉತ್ಸವಗಳಿಂದ ಹೆಚ್ಚು ಆದಾಯ

ಜಾತ್ರೆಯಲ್ಲಿ ವಿಶೇಷ ಪ್ರವೇಶ ಶುಲ್ಕದಿಂದ 65,34,250 ರೂ., ಲಾಡು ಮಾರಾಟದಿಂದ 58,33,925 ರೂ., ಮಿಶ್ರ ಪ್ರಸಾದದಿಂದ 6,28,125 ರೂ., ಮಾಹಿತಿ ಕೇಂದ್ರದಿಂದ 6,09,125 ರೂ., ಪುದುವಟ್ಟಿನಿಂದ 3,52,815 ರೂ., ಅಕ್ಕಿ ಸೇವೆಯಿಂದ 1,58,250 ರೂ., 2,30,090 ರೂ. ಸಂಗ್ರವಾಗಿದೆ. ಅಲ್ಲದೇ ದೇಗುಲದಲ್ಲಿ ನಡೆದ ಚಿನ್ನ, ಬೆಳ್ಳಿ ತೇರಿನ ಉತ್ಸವ, ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನ ಉತ್ಸವಾದಿಗಳಿಂದ 89,28,902 ರೂ. ಹಾಗೂ ಇನ್ನಿತರೆ ಮೂಲಗಳಿಂದ 2,43,56,436 ರೂ. ಸಂಗ್ರಹವಾಗಿದೆ. ಇದರಲ್ಲಿ ಸೇವಾ ಉತ್ಸವಾದಿಗಳಿಂದ ಸಂಗ್ರಹವಾಗಿರುವ ಆದಾಯ ಹೆಚ್ಚಿನದಾಗಿದೆ.

34,74,326 ರೂ. ಆದಾಯ ಹೆಚ್ಚಳ

ಕಳೆದ ವರ್ಷದ ದೀಪಾವಳಿ ಜಾತ್ರೆಯಲ್ಲಿ ಲಾಡು ಮಾರಾಟದಿಂದ 54,68,500 ರೂ., ವಿಶೇಷ ಪ್ರವೇಶ ಶುಲ್ಕದಿಂದ 38,78,100 ರೂ., ಮಿಶ್ರ ಪ್ರಸಾದ ಮಾರಾಟದಿಂದ 8,96,125 ರೂ., ಮಾಹಿತಿ ಕೇಂದ್ರದಿಂದ 6,19,475 ರೂ., ಪುದುವಟ್ಟುನಿಂದ 2,79,120 ರೂ., ಅಕ್ಕಿ ಸೇವೆಯಿಂದ 1,67,400 ರೂ., ತೀರ್ಥ ಮಾರಾಟದಿಂದ 1,85,690 ರೂ., ಕಲ್ಲು ಸಕ್ಕರೆ, ಬ್ಯಾಗ್ ಮಾರಾಟದಿಂದ 1,30,490 ರೂ. ಹಾಗೂ ಚಿನ್ನ, ಬೆಳ್ಳಿ ತೇರಿನ ಉತ್ಸವ, ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನ ಉತ್ಸವಗಳಿಂದ 86,88,036 ರೂ., ಇನ್ನಿತರಮೂಲಗಳಿಂದ ಒಟ್ಟು 2,08,82,110 ರೂ. ಆದಾಯ ಸಂಗ್ರಹವಾಗಿತ್ತು. ಆದರೆ ಈ ಬಾರಿ 2,43,56,436 ರೂ. ಸಂಗ್ರಹವಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ 34,74,326 ರೂ. ಹೆಚ್ಚಳ ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net