ಅಕ್ರಮವಾಗಿ ಗಡಿ ದಾಟುತ್ತಿದ್ದ ಐವರು ಬಾಂಗ್ಲಾದೇಶೀಯರ ಬಂಧನ

bangla
Published on

ಕೊಲ್ಕತ : ಭಾರತ-ಬಾಂಗ್ಲಾದೇಶದ ನಡುವಣ ಅಂತರರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ದಾಟುತ್ತಿದ್ದ ಐವರು ಬಾಂಗ್ಲಾದೇಶೀ ಪ್ರಜೆಗಳನ್ನು ಗಡಿ ಭದ್ರತಾ ಪಡೆ(ಬಿಎಸ್​ಎಫ್​) ಬಂಧಿಸಿದೆ. ಪಶ್ಮಿಮ ಬಂಗಾಳದ ನಾಡಿಯ ಪ್ರಾಂತ್ಯದ ಗಡಿಭಾಗದಲ್ಲಿ ಬಿಎಸ್​ಎಫ್​​ನ ಸೌತ್​ ಬೆಂಗಾಳ್ ಫ್ರಾಂಟಿಯರ್​ ಟ್ರೂಪ್​ನವರು ನಾಲ್ಕು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಬಂಧಿಸಿದ್ದಾರೆ.

ಬಂಧಿತರು ಬಾಂಗ್ಲಾದೇಶದ ಜೆಸ್ಸೋರ್​ ಮತ್ತು ನರೈಲ್ ಜಿಲ್ಲೆಗಳ ನಿವಾಸಿಗಳು. ಗಡಿಯ ಹತ್ತಿರ ಬಾಳೆತೋಟದಲ್ಲಿ ಮುಚ್ಚಿಟ್ಟುಕೊಂಡಿದ್ದು, ಗಸ್ತು ಕರ್ತವ್ಯದಲ್ಲಿದ್ದ ಬಿಎಸ್​ಎಫ್​ ಸಿಬ್ಬಂದಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ವಿಚಾರಣೆ ನಡೆಸಿದಾಗ ಅವರೆಲ್ಲರೂ ಬೇರೆ ಬೇರೆ ಸಮಯದಲ್ಲಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರು. ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಹಫೀಜುಲ್​ ಎಂಬ ದಲ್ಲಾಳಿಗೆ 10 ರಿಂದ 12 ಸಾವಿರ ರೂ.ಗಳನ್ನು ಕೊಟ್ಟು ಗಡಿ ದಾಟುವ ಪ್ರಯತ್ನದಲ್ಲಿದ್ದರು ಎಂಬುದು ತಿಳಿದುಬಂದಿದೆ.

ಮುಂದಿನ ಕಾನೂನು ಕ್ರಮ ಕೈಗೊಳ್ಳಲು, ಬಂಗಾಳದ 24 ಪರಗಣಾಸ್ ಜಿಲ್ಲೆಯ ಹನ್ಸ್​ಖಲಿ ಪೊಲೀಸರಿಗೆ ಬಂಧಿತರನ್ನು ಹಸ್ತಾಂತರಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net