48 ಬಗೆಯ ಗಿಡ ನೆಟ್ಟು ಪರಿಸರ ದಿನ ಆಚರಣೆ

26NGD1
Published on


ಮೈಸೂರು : ವಾಲೆಂಟೀಯರ್ ಆಫ್ ಮೈಸೂರು ಸಂಘಟನೆ ಕಾರ್ಯಕರ್ತರು ಇಲ್ಲಿನ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯ ಅಂಗಳದಲ್ಲಿ ಹೂವಿನ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದರು.


ದೇವಾಲಯದ ಮುಂಭಾಗದ ಖಾಲಿ ಪ್ರದೇಶ ಹಾಗೂ ದಾಸೋಹ ಭವನದ ಅಂಗಳದಲ್ಲಿ ಬಿಲ್ವ ಪತ್ರೆ, ರುದ್ರಾಕ್ಷಿ, ಅತ್ತಿ, ಆಲ, ನಾಗಪುಷ್ಪ , ಸಂಪಿಗೆ, ದಾಸವಾಳ, ಗುಲಾಬಿ, ಸೇವಂತಿಗೆ, ಪಂಚಪತ್ರೆ ಸೇರಿದಂತೆ 48 ಬಗೆಯ ಗಿಡಗಳನ್ನು ನೆಟ್ಟು ನೀರೆರೆದರು.


ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್‌ಕುಮಾರ್ ಮಾತನಾಡಿ, ದೇವಾಲಯದ ಅಂಗಳದಲ್ಲಿರುವ ಖಾಲಿ ಜಾಗದಲ್ಲಿ ಗಿಡ ನೆಡಲು ಮುಂದಾಗಿರುವುದು ಶ್ಲಾಘನೀಯ. ದೇವಾಲಯದ ಪಾವಿತ್ರೃತೆಗೆ ಧಕ್ಕೆ ಬಾರದ ರೀತಿಯಲ್ಲಿ ಪಾರಂಪರಿಕ ಗಿಡಗಳನ್ನು ಮಾತ್ರ ನೆಡುವಂತೆ ಸಲಹೆ ನೀಡಲಾಗಿದೆ ಎಂದು ಹೇಳಿದರು.


ಸಂಘಟನೆಯ ಪ್ರದೀಪ್ ಮಾತನಾಡಿ, ದೇವಸ್ಥಾನಕ್ಕೆ ಸೇರಿದ ಸುಮಾರು 2.5 ಏಕರೆ ಪ್ರದೇಶದಲ್ಲಿ ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಟ್ಟು ಪೋಷಿಸುವ ಉದ್ದೇಶ ನಮ್ಮದಾಗಿದೆ. ಈ ಕಾರ್ಯಕ್ಕೆ ವಿದ್ಯಾವರ್ಧಕ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮೈಸೂರು ನಗರದ ಅರಸು ಮಹಿಳಾ ವೇದಿಕೆ ಸದಸ್ಯ ಕೈಜೊಡಿಸಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net