4,603 ರಿಂಗ್​ ನಿರ್ಮಾಣಕ್ಕೆ ಚಾಲನೆ

Published on

ನಮ್ಮ ಮೆಟ್ರೋ 2ನೇ ಹಂತದ ಸುರಂಗ ಮಾರ್ಗದ ನಿರ್ಮಾಣ ಕಾರ್ಯಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ. ಡೈರಿ ವೃತ್ತದಿಂದ ನಾಗವಾರವರೆಗೆ ಸುರಂಗ ಮಾರ್ಗ ನಿರ್ಮಾಣಗೊಳ್ಳುತ್ತಿದ್ದು, ಶಿವಾಜಿನಗರ ಮತ್ತು ಕಂಟೋನ್ಮೇಂಟ್​ನಲ್ಲಿ ಈಗಾಗಲೆ ಸುರಂಗ ಕೊರೆಯುವ ಕಾರ್ಯ ಆರಂಭಿಸಲಾಗಿದೆ. ಟ್ಯಾನರಿ ರಸ್ತೆಯಿಂದ ನಾಗಸಂದ್ರವರೆಗಿನ ಸುರಂಗ ಮಾರ್ಗ ನಿರ್ಮಾಣಕ್ಕೆ ಶ್ರೀ ಚಾಲನೆ ನೀಡಲಾಗುತ್ತದೆ. ಅದಕ್ಕೂ ಮುನ್ನ ಆ ಮಾರ್ಗದಲ್ಲಿ ಬಳಸಲಾಗುವ ರಿಂಗ್​ಗಳ ನಿರ್ಮಾಣಕ್ಕೆ ಬೈಯಪನಹಳ್ಳಿ ಯಾರ್ಡ್​ನಲ್ಲಿ ಚಾಲನೆ ನೀಡಲಾಗಿದೆ. ಒಟ್ಟು 4,603 ರಿಂಗ್​ಗಳನ್ನು ನಿಮಿರ್ಸಲಾಗುತ್ತಿದ್ದು, ಐಟಿಡಿ ಸಿಮೆಂಟೇಷನ್​ ಇಂಡಿಯಾ ಸಂಸ್ಥೆ ಈ ಕಾರ್ಯ ಆರಂಭಿಸಿದೆ.

ಬೆಂಗಳೂರು: ಟ್ಯಾನರಿ ರಸ್ತೆಯಿಂದ ನಾಗವಾರವರೆಗೆ ನಿರ್ಮಾಣಗೊಳ್ಳಲಿರುವ ನಮ್ಮ ಮೆಟ್ರೋ 2ನೇ ಹಂತದ ಸುರಂಗ ಮಾರ್ಗದಲ್ಲಿ ಬಳಸಲಾಗುವ ರಿಂಗ್​ಗಳ ನಿರ್ಮಾಣ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net