ದೆಹಲಿಯಲ್ಲಿ 45 ದಿನಗಳ ಮಗುವಿನ ಜೀವ ತೆಗೆದ ಮಹಾಮಾರಿ ಕರೊನಾ ವೈರಸ್​; ಮಹಾರಾಷ್ಟ್ರದಲ್ಲಿ 8ದಿನಗಳ ಶಿಶುವಿಗೆ ಸೋಂಕು

Coronadeath 19 April 20
Published on

ನವದೆಹಲಿ: ಕರೊನಾ ವೈರಸ್​ ನವಜಾತ ಶಿಶುಗಳಿಗೆ ತಗುಲುತ್ತಿರುವುದು ಆತಂಕದ ವಿಚಾರವಾಗಿದೆ. ಈಗ ಈ ಕರೊನಾ ವೈರಸ್​ನಿಂದಾಗಿ 45 ದಿನಗಳ ಹೆಣ್ಣುಶಿಶುವಿನ ಪ್ರಾಣ ಹೋಗಿದೆ.

ದೇಶದಲ್ಲಿ ಕರೊನಾ ವೈರಸ್​ನಿಂದ ಮೃತಪಟ್ಟ ಅತ್ಯಂತ ಕಿರಿಯ ಪೇಶೆಂಟ್​ ಈ ನವಜಾತ ಶಿಶು. ಏ.14ರಂದು ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದ ಮಗುವಿಗೆ ಸೋಂಕು ಇರುವುದು ಏಪ್ರಿಲ್​ 16ರಂದು ದೃಢಪಟ್ಟಿತ್ತು.

ಇದುವರೆಗೆ ದೇಶಾದ್ಯಂತ ಅನೇಕ ನವಜಾತ ಶಿಶುಗಳಲ್ಲಿ, ಮಕ್ಕಳಲ್ಲಿ ಕರೊನಾ ವೈರಸ್ ಕಾಣಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ 8 ದಿನಗಳ ಮಗುವಿಗೆ ಕರೊನಾ ಸೋಂಕು ತಗುಲಿದ್ದು ವರದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net