ರಾಷ್ಟ್ರೀಯ ಸಬ್​ ಜೂನಿಯರ್ ಈಜು: ಕರ್ನಾಟಕಕ್ಕೆ ಮತ್ತೆರಡು ಚಿನ್ನದ ಪದಕ

ರಾಷ್ಟ್ರೀಯ ಸಬ್​ ಜೂನಿಯರ್ ಈಜು: ಕರ್ನಾಟಕಕ್ಕೆ ಮತ್ತೆರಡು ಚಿನ್ನದ ಪದಕ
ರಾಷ್ಟ್ರೀಯ ಸಬ್​ ಜೂನಿಯರ್ ಈಜು: ಕರ್ನಾಟಕಕ್ಕೆ ಮತ್ತೆರಡು ಚಿನ್ನದ ಪದಕ
Published on

ಬೆಂಗಳೂರು: ಕರ್ನಾಟಕ ತಂಡ ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ 42ನೇ ಸಬ್​ ಜೂನಿಯರ್​ ರಾಷ್ಟ್ರೀಯ ಈಜು ಚಾಂಪಿಯನ್​ಷಿಪ್​ನ (

sub junior national 2026

) 3ನೇ ದಿನವಾದ ಶನಿವಾರ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಆರು ಕಂಚಿನ ಸಹಿತ ಒಟ್ಟು 9 ಪದಕಗಳನ್ನು ಗೆದ್ದುಕೊಂಡಿದೆ. ಕರ್ನಾಟಕ ಕೂಟದ ಮೊದಲೆರಡು ದಿನಗಳಲ್ಲಿ 6 ಚಿನ್ನ, 6 ಬೆಳ್ಳಿ, 10 ಕಂಚಿನ ಸಹಿತ 22 ಪದಕಗಳನ್ನು ಜಯಿಸಿತ್ತು.

ಕರ್ನಾಟಕ ತಂಡ ಬಾಲಕರ 4/100 ಮೀ. ಮೆಡ್ಲೆ ರಿಲೇ ಮತ್ತು ಬಾಲಕಿಯರ 4/100 ಮೀ. ಮೆಡ್ಲೆ ರಿಲೇಯಲ್ಲಿ ಚಿನ್ನದ ಪದಕಗಳನ್ನು ಒಲಿಸಿಕೊಂಡಿತು. ಬಾಲಕರ 200 ಮೀ. ಬ್ರೆಸ್ಟ್​ಸ್ಟ್ರೊಕ್​ ವಿಭಾಗದಲ್ಲಿ ರಾಜ್ಯದ ಅರ್ಜುನ್​ ರಾವನ್​ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಉಳಿದಂತೆ ಬಾಲಕರ 400 ಮೀ. ಫ್ರೀಸ್ಟೈಲ್​ನಲ್ಲಿ ಶ್ರೇಯಸ್​ ಸುನೀಲ್​ (ಗ್ರೂಪ್​2), ವಿವಾನ್​ ಕ್ರಿಷ್ಣ ಟಿ.ಎಸ್​. (ಗ್ರೂಪ್​3), ಬಾಲಕಿಯರ 400 ಮೀ. ಫ್ರೀಸ್ಟೈಲ್​ನಲ್ಲಿ ಇದಿಕಾ ಭಟ್​ (ಗ್ರೂಪ್​2), ಗಾಯತ್ರಿ ಸೋಮಯಾಜಿ (ಗ್ರೂಪ್​3), ಬಾಲಕಿಯರ 200 ಮೀ. ಬ್ರೆಸ್ಟ್​ಸ್ಟ್ರೊಕ್​ನಲ್ಲಿ ಸಿರಿ ಪ್ರೀತಮ್​ (ಗ್ರೂಪ್​2), 100 ಮೀ. ಬಟರ್​ಫ್ಲೈನಲ್ಲಿ ಪಣಿಷ್ಕಾ ಕೆ. (ಗ್ರೂಪ್​3) ಕಂಚಿನ ಪದಕ ಒಲಿಸಿಕೊಂಡರು. ಭಾನುವಾರ ಕೊನೇ ದಿನದ ಸ್ಪರ್ಧೆಗಳು ನಡೆಯಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net