

ವಿಜಯವಾಣಿ ಸುದ್ದಿಜಾಲ ಎಚ್.ಡಿ.ಕೋಟೆ
ಬೇರೆ ಬೇರೆ ರಾಜ್ಯಗಳಿಂದ ಬಂದು ತಾಲೂಕಿನಲ್ಲಿ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ 42 ಕಾರ್ಮಿಕರು ಭಾನುವಾರ ತಮ್ಮ ಊರುಗಳತ್ತ ತೆರಳಿದರು.
ಬಿಹಾರ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಇವರು ತಾಲೂಕಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ರೂಪಿಸಿಕೊಂಡಿದ್ದರು. ಕೋವಿಡ್-19 ಸೋಂಕಿನಿಂದ ಇಡಿ ದೇಶವೇ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಕೂಲಿ ಇಲ್ಲದ ಕಾರಣ ಮತ್ತೆ ತಮ್ಮ ಸ್ವಂತ ಸ್ಥಳಕ್ಕೆ ತೆರಳಿದರು.
ತಹಸೀಲ್ದಾರ್ ಆರ್.ಮಂಜುನಾಥ್, ಆರಕ್ಷಕ ವೃತ್ತ ನಿರೀಕ್ಷಕ ಪುಟ್ಟಸ್ವಾಮಿ, ಸಾರಿಗೆ ಘಟಕದ ವ್ಯವಸ್ಥಾಪಕ ತ್ಯಾಗರಾಜು, ಕಂದಾಯ ನಿರೀಕ್ಷಕ ಮಹೇಶ್, ಗ್ರಾಮಲೆಕ್ಕಿಗರಾದ ರಾಕೇಶ್, ಸಿದ್ದರಾಮೇಗೌಡ, ಗಿರೀಶ್ ಇತರರಿದ್ದರು.