ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕರೊನಾ; ಬಾಗಲಕೋಟೆಯಿಂದ 42, ಹುಬ್ಬಳ್ಳಿಯಿಂದ 7 ಬಸ್​ಗಳ ಸಂಚಾರ ಸ್ಥಗಿತ

Bagalkot 19 march 20
Published on

ಬಾಗಲಕೋಟೆ: ಕರೊನಾ ಭೀತಿ ಹಿನ್ನೆಲೆಯಲ್ಲಿ ಬಾಗಲಕೋಟೆಯಿಂದ ಮಹಾರಾಷ್ಟ್ರಕ್ಕೆ ಸಂಚರಿಸುತ್ತಿದ್ದ ಬಸ್​ಗಳ ಸಂಚಾರವನ್ನು ಬಂದ್ ಮಾಡಲಾಗಿದೆ.

ಜಿಲ್ಲೆಯಿಂದ ಮುಂಬೈ, ಪುಣೆ, ಸತಾರ, ಮೀರಜ್​, ಶಿರಡಿ, ಸೊಲ್ಲಾಪುರ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ ಬಸ್​ಗಳು ಸ್ಥಗಿತಗೊಂಡಿವೆ.

ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಾಗಲಕೋಟೆಯ ವಿವಿಧ ಘಟಕಗಳಿಂದ ತೆರಳುತ್ತಿದ್ದ ಬಸ್​ಗಳನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಆದೇಶ ನೀಡಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲ ಬೆಂಗಳೂರಿಗೆ ಸಂಚರಿಸುತ್ತಿದ್ದ ಮೂರು ಹೈಟೆಕ್​ ಬಸ್​ಗಳು, ಹೈದರಾಬಾದ್​ಗೆ ತೆರಳುತ್ತಿದ್ದ ರಾಜಹಂಸ ಬಸ್​ಗಳೂ ಕ್ಯಾನ್ಸ್​ಲ್​ ಆಗಿವೆ.

ಹಾಗೇ ಹುಬ್ಬಳ್ಳಿಯಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ 7 ಬಸ್​ಗಳೂ ಕೂಡ ಸಂಚಾರ ನಿಲ್ಲಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net