

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಕರೊನಾ ಸೋಂಕಿಗೆ ಒಳಗಾದವರ ಸಂಖ್ಯೆ ಇಂದು ಕೂಡ ನಾಲ್ಕು ಸಾವಿರ ದಾಟಿದೆ. ಶನಿವಾರ ಸಂಜೆಯಿಂದ ಭಾನುವಾರ ಸಂಜೆಯವರೆಗೆ ಒಟ್ಟು 4,120 ಜನರಲ್ಲಿ ಸೋಂಕು ಕಂಡು ಬಂದಿದೆ.
ರಾಜ್ಯದಲ್ಲಿ ಒಟ್ಟಾರೆ ಕೋವಿಡ್ ರೋಗಿಗಳ ಪ್ರಮಾಣ 63,772ಕ್ಕೆ ಏರಿದೆ. ಈ ಪೈಕಿ ಪ್ರಸ್ತುತ ಸಕ್ರಿಯ ರೋಗಿಗಳ ಸಂಖ್ಯೆ 39,370 ಆಗಿದೆ. ಇಂದು ಮೃತಪಟ್ಟವರ ಸಂಕ್ಯೆ 91 ಆಗಿದೆ. ಒಟ್ಟು ಸಾವಿನ ಸಂಖ್ಯೆ 1,331ಕ್ಕೆ ತಲುಪಿದೆ. ಮರಣದ ಪ್ರಮಾಣ ಶೇ.2.8ಕ್ಕೆ ಏರಿಕೆಯಾಗಿದೆ.
ಕಳೆದ 24 ತಾಸುಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 1,290. ಈವರೆಗೆ ರಾಜ್ಯದಲ್ಲಿ ಒಟ್ಟು ಚೇತರಿಕೆ ಕಂಡವರು 23,065 ಮಂದಿ. ಇದರ ಶೇಕಡಾವಾರು ಪ್ರಮಾಣ 36.1 ಆಗಿದೆ.
ಇನ್ನು, ಬೆಂಗಳೂರಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆ 2,156. ಅಲ್ಲಿಗೆ ಸತತ ನಾಲ್ಕನೇ ದಿನವೂ ಕೋವಿಡ್ ಪ್ರಮಾಣ ಎರಡು ಸಾವಿರದ ಗಡಿ ದಾಟಿಸಂತಾಗಿದೆ.ಒಟ್ಟು ಸೋಂಕಿತರ ಸಂಖ್ಯೆ 31,777 ಆಗಿದೆ. ಮತ್ತೆ 36 ಜನರು ಮೃತಪಡುವ ಮೂಲಕ ಒಟ್ಟಾರೆ ಸಾವಿಗೀಡಾದವರು 697 ಜನರು.
ಜಿಲ್ಲಾವಾರು ಕೋವಿಡ್ ಅಂಕಿ- ಸಂಖ್ಯೆಗಳ ವಿವರ