41 ಸೆಕೆಂಡ್‌ಗಳಿಗೆ ಚಿತ್!

75
Published on

ರೋಚಕತೆಯಿಂದ ಕೂಡಿದ ದಸರಾ ಮಹೋತ್ಸವದ ಮೊದಲ ದಿನದ ನಾಡ ಕುಸ್ತಿಯಲ್ಲಿ ಪೈ.ಶಿವು ಕೇವಲ 41 ಸೆಕೆಂಡ್‌ನಲ್ಲೇ ಎದುರಾಳಿಯನ್ನು ಚಿತ್ ಮಾಡುವ ಮೂಲಕ ಪರಾಕ್ರಮ ಮೆರೆದರು.

ದಸರಾ ಕುಸ್ತಿಯ ಮೊದಲ ದಿನದ ಅತೀ ಕಡಿಮೆ ಅವಧಿಯಲ್ಲಿ ಚಿತ್ ಮಾಡಿದ ಹೆಗ್ಗಳಿಕೆಗೆ ಪೈ.ಶಿವು ಪಾತ್ರರಾದರು. ದಸರಾ ಕುಸ್ತಿ ಅಖಾಡದಲ್ಲಿ ಸೋಮವಾರ ಪೈ.ಶಿವು ತನ್ನ ಎದುರಾಳಿ ಅಬೂಬಕರ್ ಅವರನ್ನು ಕ್ಷಣಾರ್ಧದಲ್ಲೇ ಚಿತ್ ಮಾಡಿ ಜಟ್ಟಿತನ ಪ್ರದರ್ಶಿಸಿದರು. ಆ ಮೂಲಕ ಕುಸ್ತಿ ಪ್ರೇಮಿಗಳಿಗೆ ರೋಚಕ ಅನುಭವ ನೀಡಿ, ಶಿಳ್ಳೆ, ಚಪ್ಪಾಳೆಯ ಪ್ರೋತ್ಸಾಹ ಪಡೆದರು.

ಬೆಳಗಾವಿ ಪೈ.ಸಂಜು ಮತ್ತು ದಾವಣಗೆರೆ ಪೈ. ಬಸವರಾಜ್ ಪಾಟೀಲ್ ನಡುವೆ ಅರ್ಧ ಗಂಟೆ ನಿಗದಿಯಾಗಿದ್ದ ದಿನದ ಎರಡನೇ ದೊಡ್ಡ ಕುಸ್ತಿ ಡ್ರಾನಲ್ಲಿ ಅಂತ್ಯಗೊಂಡು ನಿರಾಸೆ ಮೂಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net