ರಕ್ಷಿತಾರಣ್ಯದಲ್ಲಿ ಮರಗಳ ಮಾರಣಹೋಮ - ಅರಣ್ಯ ಇಲಾಖೆ ಒಪ್ಪಿಗೆ ನೀಡುವ ಮೊದಲೇ ಕಾಮಗಾರಿ - ಸ್ಥಳೀಯರಿಂದ ಪ್ರತಿಭಟನೆ ಎಚ್ಚರಿಕೆ

PTR_21 FEB_7 A
Published on

ಅರಣ್ಯ ಇಲಾಖೆ ಮರ ಕಡಿಯುವುದಕ್ಕೆ ಒಪ್ಪಿಗೆ ನೀಡುವ ಮೊದಲೇ ವೀರಕಂಬ ಸಿರಿಚಂದನ ವನದಲ್ಲಿ ೧.೫ಎಕರೆ ವಿವಿಧ ಜಾತಿ ಸಾವಿರಾರು ಮರಗಳ ಮಾರಣಹೋಮ ನಡೆದಿದೆ. ವಿದ್ಯುತ್ ಟವರ್ ನಿರ್ಮಾಣದ ಸ್ಥಳಕ್ಕೆ ಹೋಗುವುದಕ್ಕೆ ರಸ್ತೆಗಳ ನಿರ್ಮಾಣವನ್ನು ಮಾಡಿದ್ದು, ಪೊಲೀಸ್ ಭದ್ರತೆಯನ್ನು ಪಡೆದುಕೊಂಡು ಕಾಮಗಾರಿ ನಡೆಸುತ್ತಿದ್ದಾರೆ. ಮರಗಳ ರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆಯ ಅಽಕಾರಿಗಳೂ ಅಕ್ರಮಕ್ಕೆ ಸಾತ್ ನೀಡುತ್ತಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಲ್ಲಡ್ಕ ವಿಟ್ಲ ರಸ್ತೆಯ ವೀರಕಂಬ ಕಲ್ಮಲೆಯ ಮೂಲಕ ಚಂದನವನದ ಮಧ್ಯ ಭಾಗಕ್ಕೆ ರಸ್ತೆ ನಿರ್ಮಾಣ ಮಾಡಲಾಗಿದೆ. ಅನಂತಾಡಿಯಿಂದ ಮಜಿ ಹೋಗುವ ರಸ್ತೆಯ ಅವೇತಿಕಲ್ಲು ಮೂಲಕವಾಗಿ ಚಂದನವನದ ಇನ್ನೊಂದು ಭಾಗಕ್ಕೆ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಅರಣ್ಯ ಇಲಾಖೆಯ ಅಽಕಾರಿಗಳಲ್ಲಿ ಅಗತ್ಯ ವಸ್ತುಗಳನ್ನು ಡ್ರೋನ್ ಮೂಲಕ ಸಾಗಾಟ ಮಾಡುವುದಾಗಿ ಹೇಳಿಕೊಂಡು ಮರ ತೆರವಿನ ಪ್ರಮಾಣವನ್ನು ಕಡಿಮೆ ತೋರಿಸಲಾಗಿತ್ತು. ಆದರೆ ಸದ್ಯ ಅರಣ್ಯದುದ್ದಕ್ಕೂ ರಸ್ತೆ ನಿರ್ಮಾಣ ಮಾಡಿ ಪರಿಸರಕ್ಕೆ ತೀವ್ರ ಹಾನಿ ಮಾಡಿದ್ದಾರೆ.

ವೀರಕಂಬ ರಕ್ಷಿತಾರಣ್ಯ ಪ್ರದೇಶದ ಒಳಗೆ ಮೂರು ಕಡೆಯಲ್ಲಿ ವಿದ್ಯುತ್ ಗೋಪುರ ನಿರ್ಮಾಣಕ್ಕೆ ಸುಮಾರು ಅರ್ಧ ಎಕರೆ ಭೂಮಿಯ ಮರಗಳ ತೆರವು ಮಾಡಿ ಸಮತಟ್ಟು ಮಾಡಲಾಗಿದೆ. ಮರ ತೆರವು ಪ್ರಕ್ರಿಯೆಗೆ ಸರ್ಕಾರ ಇನ್ನೂ ಅಽಕೃತ ಮಂಜೂರಾತಿಯಾಗಿಲ್ಲ. ಸರ್ಕಾರದ ಮಟ್ಟದಲ್ಲಿ ಮೊದಲ ಹಂತದ ಒಪ್ಪಿಗೆಯಾಗಿದ್ದರೂ, ಎರಡನೇ ಹಂತದ ಒಪ್ಪಿಗೆ ನೀಡುವುದಕ್ಕೆ ಹೆಚ್ಚುವರಿ ವಿವರಗಳನ್ನು ಕೇಳಿ ಪರವಾನಿಗೆ ನಿರಾರಕರಿಸಲಾಗಿದೆ. ಈ ನಡುವೆ ಮರಗಳ ತೆರವು ಮಾಡುವ ಮೂಲಕ ಅಽಕಾರಿಗಳು ಭಾರೀ ಪ್ರಮಾಣದ ಬ್ರಷ್ಟಾಚಾರದಲ್ಲಿ ತೊಡಗಿರುವ ಅನುಮಾನ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net