ಆಪರೇಷನ್ ಸಿಂಧೂರಕ್ಕೆ 400 ವಿಜ್ಞಾನಿಗಳ ಶ್ರಮ

untitled-design-14-68c06b180de71
Published on

ನವದೆಹಲಿ: ಭಯೋತ್ಪಾದನೆ ವಿರುದ್ಧ ಭಾರತದ ಸೇನೆ ನಡೆಸಿದ ಆಪರೇಷನ್ ಸಿಂಧೂರ ದಾಳಿ ವೇಳೆ ಮಿಲಿಟರಿಗೆ ಭೂ ವೀಕ್ಷಣಾಲಯ ಮತ್ತು ಸಂವಹನ ಉಪಗ್ರಹಗಳ ನೆರವನ್ನು ಒದಗಿಸಲು 400ಕ್ಕೂ ಹೆಚ್ಚು ವಿಜ್ಞಾನಿಗಳು ಹಗಲಿರುಳೂ ಕೆಲಸ ಮಾಡಿದ್ದರು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ವಿ. ನಾರಾಯಣನ್ ಮಂಗಳವಾರ ಹೇಳಿದ್ದಾರೆ.

ಇಸ್ರೋ ತನ್ನ ರಾಷ್ಟ್ರೀಯ ಭದ್ರತಾ ಅಗತ್ಯಗಳಿಗೆ ಉಪಗ್ರಹದಿಂದ ಉಪಗ್ರಹ ದತ್ತಾಂಶಗಳನ್ನು ಒದಗಿಸಿತ್ತು ಎಂದು ಅಖಿಲ ಭಾರತ ನಿರ್ವಹಣಾ ಸಂಸ್ಥೆ(ಎಐಎಂಎ)ಯ 52ನೇ ರಾಷ್ಟ್ರೀಯ ನಿರ್ವಹಣಾ ಸಮಾವೇಶದಲ್ಲಿ ನಾರಾಯಣನ್ ತಿಳಿಸಿದರು. ಆಪರೇಷನ್ ಸಿಂಧೂರ ವೇಳೆ ಎಲ್ಲ ಉಪಗ್ರಹಗಳು ದಿನದ 24 ಗಂಟೆಯೂ ಸರಿಯಾಗಿ ಕಾರ್ಯನಿರ್ವಹಿಸಿ ಎಲ್ಲ ಅಗತ್ಯಗಳಿಗೆ ನೆರವಾಗಿದ್ದವು ಎಂದರು. ಸಶಸ್ತŠ ಸಂಘರ್ಷಗಳ ಸಮಯದಲ್ಲಿ ಅಂತರಿಕ್ಷ ಕ್ಷೇತ್ರದ ಪಾತ್ರವು ಆಪರೇಷನ್ ಸಿಂಧೂರ ವೇಳೆ ಅಧಿಕ ಪ್ರಮಾಣದಲ್ಲಿ ಬೆಳಕಿಗೆ ಬಂದಿತು.

ಗಗನಯಾನ ಯೋಜನೆ: 2027ರೊಳಗೆ ಭಾರತದ ಪ್ರಥಮ ಮಾನವಸಹಿತ ಬಾಹ್ಯಾಕಾಶ ಯಾನದ ಗಗನಯಾನ ಯೋಜನೆ ಸಂಬಂಧ ಇಸ್ರೋ 7,700 ಗ್ರೌಂಡ್ ಟೆಸ್ಟ್​ಗಳನ್ನು ಪೂರ್ಣಗೊಳಿಸಿದೆ. ಇನ್ನೂ 2,300ಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆಂದು ಇಸ್ರೋ ಮುಖ್ಯಸ್ಥರು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net