40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ :ಕೆಲಕಾಲ ಆತಂಕದ ವಾತಾವರಣ ನಿರ್ಮಾಣ

bomb-threat
Published on

ಬೆಂಗಳೂರು: ನಗರದ 40 ಖಾಸಗಿ ಶಾಲೆಗಳಿಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಸಂದೇಶ ರವಾನಿಸಿದ್ದು, ಶಾಲೆಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಎಂ.ಎಸ್.ಧೋನಿ ಗ್ಲೋಬಲ್ ಸ್ಕೂಲ್, ಬಿಷಪ್ ಕಾಟನ್ ಗರ್ಲ್ಸ್ ಮತ್ತು ಬಾಯ್ಸ ಸ್ಕೂಲ್, ಸೇಂಟ್ ಜರ್ಮನ್ ಅಕಾಡೆಮಿ ಸ್ಕೂಲ್ ಮಾರ್ಟಿನ್ ಲೂಥರ್ ಸ್ಕೂಲ್ ಮತ್ತು ಸೋಫಿಯಾ ಸ್ಕೂಲ್ ಸೇರಿದಂತೆ ನಗರದ ರಾಜರಾಜೇಶ್ವರಿ ನಗರ, ಕೆಂಗೇರಿ, ಚಾಮರಾಜಪೇಟೆ, ಹೊರಮಾವು, ರೆಸಿಡೆನ್ಸಿ ರಸ್ತೆ ಸೇರಿದಂತೆ ೪೦ ಶಾಸಗಿ ಶಾಲೆಗಳಿಗೆ ್ಟಟಜ್ಝ್ಝಿ೩೩೩ಃಠಿಟಞಜ್ಚಿಞಜ್ಝಿ.ಜಿಟ ಎಂಬ ಇ-ಮೇಲ್‌ನಿಂದ ಶುಕ್ರವಾರ ಬೆಳಗ್ಗೆ ೭.೨೫ ಕ್ಕೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ವಿಷಯ ತಿಳಿಯುತ್ತಿದಂತೆ ಶಾಲೆಗಳ ಬಳಿ ಕೆಲ ಪಾಲಕರು ದೌಡಾಯಿಸಿ ಬಂದು ಮಕ್ಕಳನ್ನು ಮನೆಗೆ ಕರೆದೊಯ್ದರು.

ಇ-ಮೇಲ್ ಗಮನಿಸುತ್ತಿದ್ದಂತೆ ಶಾಲೆಗಳ ಆಡಳಿತ ಮಂಡಳಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಎಚ್ಚೆತ್ತ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದೊಂದಿಗೆ ಶಾಲೆಗಳಿಗೆ ದೌಡಾಯಿಸಿ ಬಂದು ಮಕ್ಕಳನ್ನು ಹೊರಗೆ ಕಳುಹಿಸಿ ಶಾಲಾ ಕೊಠಡಿ ಮತ್ತು ಶಾಲಾ ಆವರಣದಲ್ಲಿ ತೀವ್ರ ತಪಾಸಣೆ ಕಾರ್ಯ ನಡೆಸಿದರು. ಕೆಲಕಾಲ ತಪಾಸಣೆ ನಡೆಸಿದ ಪೊಲೀಸರಿಗೆ ಯಾವುದೇ ಸ್ಫೋಟಕಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಸಂದೇಶ ಎಂಬ ನಿರ್ಧಾರಕ್ಕೆ ಬಂದರು. ಇದನ್ನು ತಿಳಿದ ಶಾಲಾ ಆಡಳಿತ ಮಂಡಳಿ ಮತ್ತು ಪಾಲಕರು ನಿಟ್ಟುಸಿರು ಬಿಟ್ಟರು. ಇ-ಮೇಲ್ ಡೊಮೈನ್ ಬ್ರಿಟೀಷ್ ಇಂಡಿಯನ್ ಓಷನ್ ಟೆರಿಟರಿಯ ಮೂಲದ್ದಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net