ಯುಪಿಯಲ್ಲಿ 40 ಮಿಲಿಯನ್ ವರ್ಷಗಳಷ್ಟು ಹಳೆಯ ಡೈನೋಸಾರ್ ಪಳೆಯುಳಿಕೆ ಪತ್ತೆ! ಈ ಬಗ್ಗೆ ಸಂಶೋಧಕರು ಹೇಳಿದ್ದಿಷ್ಟು | Dinosaur Fossil

Untitled design (70)
Published on

ಉತ್ತರ ಪ್ರದೇಶ: ರಾಜ್ಯದ ಸಹರಾನ್‌ಪುರ ಜಿಲ್ಲೆಯ ಸಹನ್ಸಾರಾ ನದಿಯ ದಡದಲ್ಲಿ ಉತ್ಖನನದ ವೇಳೆ ಮೂರು ಕೊಂಬಿನ ಡೈನೋಸಾರ್​ (Dinosaur Fossil) ಟ್ರೈಸೆರಾಟಾಪ್ಸ್‌ಗೆ ಸೇರಿದೆ ಪಳೆಯುಳಿಕೆ ಪತ್ತೆಯಾಗಿದ್ದು, ಇದು 40 ಮಿಲಿಯನ್​ ವರ್ಷಗಳಷ್ಟು ಹಳೆಯದ್ದು ಎಂದು 'ಮಿಂಟ್'​ ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈ ಪ್ರದೇಶದಲ್ಲಿ ನಡೆಸಿದ ಉತ್ಖನನದಲ್ಲಿ ಲಕ್ಷಾಂತರ ವರ್ಷಗಳಷ್ಟು ಹಳೆಯದಾದ ಟ್ರೈಸೆರಾಟಾಪ್ಸ್ ಎಂಬ ಡೈನೋಸಾರ್​ನ ಮೂಗಿನ ಕೊಂಬು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ನೈಸರ್ಗಿಕ ಇತಿಹಾಸ ಮತ್ತು ಸಂರಕ್ಷಣಾ ಕೇಂದ್ರದ ಸಂಸ್ಥಾಪಕ ಮೊಹಮ್ಮದ್ ಉಮರ್ ಸೈಫ್ ಈ ಬಗ್ಗೆ ಪ್ರತಿಕ್ರಿಯಿಸಿ, "ಹೊಸ ಪಳೆಯುಳಿಕೆ ಪತ್ತೆಯಾಗಿದೆ. ಇದು ಟ್ರೈಸೆರಾಟಾಪ್ಸ್‌ಗೆ ಸೇರಿದ್ದು ಎಂದು ನಾವು ನಂಬಿದ್ದೇವೆ. ಈಗ ಸಿಕ್ಕಿರುವ ಪಳೆಯುಳಿಕೆಯು ಅದರ ಮೂಗಿನ ಭಾಗವಾಗಿದೆ" ಎಂದಿದ್ದಾರೆ.

"ಪಳೆಯುಳಿಕೆ ಟ್ರೈಸೆರಾಟಾಪ್ಸ್‌ಗೆ ಸೇರಿದೆ ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಾಗದಿದ್ದರೂ, ಇದು ಜಗತ್ತಿನಲ್ಲಿ ಕಂಡುಬರುವ ಇತರ ಟ್ರೈಸೆರಾಟಾಪ್ಸ್ ಪಳೆಯುಳಿಕೆಯನ್ನು ಹೋಲುತ್ತದೆ. ಇದರ ನೋಟ, ಆಕಾರ ಮತ್ತು ಗಾತ್ರವು ಅದನ್ನೇ ಒತ್ತಿ ಹೇಳುತ್ತಿದೆ. ಈ ಡೈನೋಸಾರ್‌ಗಳು ಸುಮಾರು 66 ಮಿಲಿಯನ್ ವರ್ಷಗಳ ಹಿಂದೆ ವಾಸಿಸುತ್ತಿದ್ದವು. ಪ್ರಸ್ತುತ, ಪಳೆಯುಳಿಕೆಯನ್ನು ಸಂರಕ್ಷಿಸಲಾಗಿದೆ. ಪಳೆಯುಳಿಕೆಯು ಅದರ ಮೂಗಿನ ಭಾಗವಾಗಿದ್ದು, 35ರಿಂದ 40 ಮಿಲಿಯನ್ ವರ್ಷಗಳ ಕಾಲ ಹಳೆಯದ್ದಿರಬಹುದು" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net