ಮಹಾರಾಷ್ಟ್ರದಲ್ಲಿ ಮತ್ತೆ ಹೆಚ್ಚಿತು ಕರೊನಾ; 37ಕ್ಕೆ ಏರಿತು ಸೋಂಕಿತರ ಸಂಖ್ಯೆ

Coronavirus 27 Feb 20
Published on

ಮುಂಬೈ: ಕರೊನಾ ವೈರಸ್​ ದಾಳಿಗೆ ಪೂರ್ತಿ ವಿಶ್ವವೇ ತತ್ತರಿಸಿದ್ದು ಭಾರತದಲ್ಲಿಯು ಸಹ ಸೋಂಕಿನ ಪ್ರಮಾಣ ದಿನೇದಿನೆ ಹೆಚ್ಚಳವಾಗುತ್ತಿದೆ. ಇಂದು ಮಹಾರಾಷ್ಟ್ರದಲ್ಲಿ ನಾಲ್ವರಲ್ಲಿ ಸೋಂಕಿರುವುದು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆ ಕಂಡಿದೆ.

ದೇಶದಲ್ಲಿ ಕರೊನಾ ವೈರಸ್​ ದಾಳಿಯಿಂದ ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವ ಮಹಾರಾಷ್ಟ್ರದಲ್ಲಿ ಇಂದು ನಾಲ್ವರಲ್ಲಿ ಸೋಂಕು ಇರುವುದು ಧೃಡವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 37ಕ್ಕೆ ಏರಿದೆ. ಇಂದು ವೈರಸ್​ ಪತ್ತೆಯಾಗಿರುವವರಲ್ಲಿ ಮೂವರು ಮುಂಬೈ ನಿವಾಸಿಗಳಾಗಿದ್ದು, ಒಬ್ಬ ನವಿ ಮುಂಬೈ ನಿವಾಸಿ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ನಿನ್ನೆ (ಮಾ. 15) ರಾಜ್ಯದಲ್ಲಿ ಶಾಪಿಂಗ್​ ಮಾಲ್​ಗಳನ್ನು ಮಾರ್ಚ್​ ಅಂತ್ಯದವರೆಗೆ ಮುಚ್ಚುವಂತೆ ಆರೋಗ್ಯ ಸಚಿವ ರಾಜೇಶ್​ ತೋಪ್​ ಆದೇಶ ಹೊರಡಿಸಿದ್ದರು. ದೇಶದಲ್ಲಿ ಕರೊನಾ ಪೀಡಿತರ ಸಂಖ್ಯೆ 100 ದಾಟಿದೆ. ಭಾನುವಾರದಂದು ಅತಿ ಹೆಚ್ಚು ಜನರಲ್ಲಿ (25) ಸೋಂಕು ಇರುವುದು ಧೃಢವಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net