

ಭುವನೇಶ್ವರ್: ಇಂದು ಭದ್ರತಾ ಪಡೆ ನಾಲ್ವರು ಮಾವೋವಾದಿಗಳನ್ನು ಹೊಡೆದುರುಳಿಸಿದೆ.
ಓಡಿಶಾದ ಕಂಧಮಾಲ್ ಜಿಲ್ಲೆಯಲ್ಲಿರುವ ತುಮುಡಿಬಂಧ್ನಲ್ಲಿ ಇಂದು ಮುಂಜಾನೆ 6.30ಕ್ಕೆ ಕಾರ್ಯಾಚರಣೆ ನಡೆಸಿದ ರಕ್ಷಣಾ ಪಡೆಗಳು, ಓರ್ವ ಮಹಿಳಾ ನಕ್ಸಲ್ ಸೇರಿ ನಾಲ್ವರನ್ನು ಕೊಂದುಹಾಕಿದ್ದಾರೆ. ಹತ್ಯೆಯಾದ ನಕ್ಸಲರ ಗುರುತು ಇನ್ನೂ ಪತ್ತೆಯಾಗಿಲ್ಲ.
ತುಮುಡಿಬಂಧ್ನ ಸಿರ್ಲಾ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯದಲ್ಲಿ ನಕ್ಸಲರು ಅಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ, ಡಿಸ್ಟ್ರಿಕ್ಟ್ ವಾಲೆಂಟರಿ ಫೋರ್ಸ್ ಮತ್ತು ಸ್ಪೆಶಲ್ ಆಪರೇಶನ್ ಗ್ರೂಪ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು.
ನಕ್ಸಲರೂ ಕೂಡ ರಕ್ಷಣಾ ಸಿಬ್ಬಂದಿಯೆಡೆಗೆ ಗುಂಡಿನ ದಾಳಿ ನಡೆಸಿದ್ದವು. ತಮ್ಮ ರಕ್ಷಣೆಗಾಗಿ ಇವರೂ ಕೂಡ ತಿರುಗಿ ಗುಂಡು ಹೊಡೆದು, ನಕ್ಸಲರ ಜೀವತೆಗೆದಿದ್ದಾರೆ. ಮೃತ ನಕ್ಸಲರಿಂದ ಮಾರಕಾಸ್ತ್ರಗಳನ್ನು ರಕ್ಷಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್)