ಗಗನಯಾನಕ್ಕೆ ನಾಲ್ವರು ಗಗನಯಾತ್ರಿಗಳನ್ನು ಗುರುತಿಸಲಾಗಿದೆ, ಚಂದ್ರಯಾನ-3 ಯೋಜನೆಯೂ ಪ್ರಗತಿಯಲ್ಲಿದೆ: ಇಸ್ರೋ ಅಧ್ಯಕ್ಷ ಕೆ.ಶಿವನ್​

K Shivan 1 jan 20
Published on

ನವದೆಹಲಿ: ಭಾರತದ ಮುಂದಿನ ಗಗನಯಾನ ಮಿಷನ್​ಗೆ ನಾಲ್ವರು ಗಗನಯಾತ್ರಿಗಳನ್ನು ಗುರುತಿಸಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮುಖ್ಯಸ್ಥ ಕೆ.ಶಿವನ್​ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗಗನಯಾನವು ಭಾರತೀಯ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ ಭಾಗವಾಗಿ 2022ರ ಬಳಿಕ 7 ದಿನಗಳ ಕಾಲ ಗಗನಯಾತ್ರಿಗಳನ್ನು ಕಳುಹಿಸಲು ಭಾರತೀಯ ಸಿಬ್ಬಂದಿ ಕಕ್ಷೀಯ ಬಾಹ್ಯಾಕಾಶ ನೌಕೆಯಾಗಿದೆ ಎಂದು ಹೇಳಿದರು.

ಹಲವಾರು ಗಗನಯಾನ ವ್ಯವಸ್ಥೆಯನ್ನು ಪರೀಕ್ಷೆ ಮಾಡಬೇಕಿದೆ. ಇದರೊಂದಿಗೆ ಸಿಬ್ಬಂದಿ ತರಬೇತಿಯು ಈ ವರ್ಷದ ಪ್ರಮುಖ ಚಟುವಟಿಕೆಯಾಗಿರಲಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಇದೇ ವೇಳೆ ಚಂದ್ರಯಾನ-3ರ ಬಗ್ಗೆ ಮಾತನಾಡಿದ ಅವರು ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಚಂದ್ರಯಾನ ಯೋಜನೆ ಪ್ರಗತಿಯಲ್ಲಿದೆ. ಮುಂದಿನ ವರ್ಷ ಉಡಾವಣೆಯಾಗಬಹುದೆಂದು ತಿಳಿಸಿದರು. ಸದ್ಯ ಉಡಾವಣೆ ಮಾಡಿರುವ ಚಂದ್ರಯಾನ-2 ತುಂಬಾ ಯಶಸ್ವಿಯಾಗಿದೆ. ಆದರೆ, ವಿಕ್ರಮ್​ ಲ್ಯಾಂಡರ್​ನ​ ಸಾಫ್ಟ್​ ಲ್ಯಾಂಡ್​ ಸಫಲವಾಗಲಿಲ್ಲ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

ಇನ್ನು ಎರಡನೇ ಬಾಹ್ಯಾಕಾಶ ಕೇಂದ್ರ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ತಮಿಳುನಾಡಿದ ತೂತುಕುಡಿಯಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net