4 ಕೈ, 4 ಕಾಲುಗಳ ಎರಡೂವರೆ ವರ್ಷದ ಹುಡ್ಗಿಗೆ ಸಿಕ್ತು ಹೊಸ ಜೀವನ; ನಟ ಸೋನು ಸೂದ್ ನೆರವು..

Child
Published on

ಬಿಹಾರ: ಕರೊನಾ ಸಮಯದಲ್ಲಿ ಸಂಕಷ್ಟಕ್ಕೀಡಾಗಿದ್ದ ಹಲವರಿಗೆ ನಾನಾ ಥರದಲ್ಲಿ ನೆರವಾಗಿದ್ದ ಬಾಲಿವುಡ್ ನಟ ಸೋನು ಸೂದ್ ಇದೀಗ ಎರಡೂವರೆ ವರ್ಷಗಳ ಮಗುವೊಂದು ಹೊಸ ಜೀವನ ಪಡೆದುಕೊಳ್ಳಲು ಸಹಾಯ ಮಾಡಿದ್ದಾರೆ.

ಬಿಹಾರದ ನವಾಡ ಜಿಲ್ಲೆಯ ಎರಡೂವರೆ ವರ್ಷದ ಹುಡುಗಿಗೆ ಹುಟ್ಟಿನಿಂದಲೇ ಎರಡು ಕೈ-ಕಾಲು ಹೆಚ್ಚುವರಿ ಆಗಿತ್ತು. ಅಂದರೆ ಒಟ್ಟು ನಾಲ್ಕು ಕೈ, ನಾಲ್ಕು ಕಾಲುಗಳನ್ನು ಹೊಂದಿದ್ದರಿಂದ ಕಷ್ಟ ಅನುಭವಿಸುತ್ತಿದ್ದ ಈ ಮಗುವಿಗೆ ಚಿಕಿತ್ಸೆ ಭಾರಿ ಹಣ ಬೇಕಾದ್ದರಿಂದ ಮಾಧ್ಯಮವೊಂದು ಈ ಕುರಿತು ಬೆಳಕು ಚೆಲ್ಲಿತ್ತು.

ಇದು ನಟ ಸೋನು ಸೂದ್ ಗಮನಕ್ಕೂ ಬಂದಿತ್ತು. ಮೇ 28ರಂದು ಈ ಕುರಿತು ರಿಟ್ವೀಟ್ ಮಾಡಿದ್ದ ಸೋನು ಸೂದ್, ಚಿಂತೆ ಮಾಡಿಕೊಳ್ಳಬೇಡಿ, ಚಿಕಿತ್ಸೆ ಶುರುವಾಗಿದೆ, ಪ್ರಾರ್ಥಿಸಿ ಎಂಬುದಾಗಿ ಟ್ವೀಟ್ ಮಾಡಿದ್ದರು. ಇಂದು ಆ ಕುರಿತು ಮತ್ತೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಸೋನು ಸೂದ್, ಜಗತ್ತಿನ ಅತ್ಯಂತ ಕ್ಲಿಷ್ಟ ಶಸ್ತ್ರಚಿಕಿತ್ಸೆಗಳಲ್ಲಿ ಒಂದು ಯಶಸ್ವಿಯಾಗಿದೆ ಎಂದು ಆಪರೇಷನ್​ಗೆ ಒಳಗಾಗಿರುವ ಆ ಮಗುವಿನ ಫೋಟೋ ಪೋಸ್ಟ್ ಮಾಡಿಕೊಂಡಿದ್ದಾರೆ. ವೈದ್ಯರು ಮಗುವಿಗೆ ಹೆಚ್ಚುವರಿಯಾಗಿ ಇರುವ ಎರಡು ಕೈ ಹಾಗೂ ಎರಡು ಕಾಲುಗಳನ್ನುಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದು, ಮಗು ಈಗ ಎಲ್ಲರಂತೆ ಸಹಜ ಜೀವನ ನಡೆಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net