

ಕಡೂರು: ನಬಾರ್ಡ್ ಬ್ಯಾಂಕ್‌ನಿಂದ ರೈತರಿಗೆ ಸಾಲದ ಸೌಲಭ್ಯವಾಗಿ 4.89 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮೋಹನ್‌ನಾಯ್ಕ ತಿಳಿಸಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಲಾನುಭವಿ ರೈತರಿಗೆ ಚೆಕ್ ವಿತರಿಸಿ ಮಾತನಾಡಿ, ಮೊದಲ ಹಂತವಾಗಿ ಸಾಮಾನ್ಯವರ್ಗದ ರೈತರಿಗೆ 1.31 ಕೋಟಿ ರೂ.ಗೂ ಹೆಚ್ಚು ಮೊತ್ತದ ಸಾಲದ ಚೆಕ್‌ನ್ನು ನೂರಕ್ಕೂ ಅಧಿಕ ರೈತರಿಗೆ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ವಿಭಾಗದ ರೈತರಿಗೆ ಸಾಲದ ಚೆಕ್ ವಿತರಿಸಲಾಗುವುದು ಎಂದರು.
ರೈತರು ಸಾಲವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಮರುಪಾವತಿಸಿದರೆ ಮತ್ತೊಬ್ಬರಿಗೆ ಸಹಕಾರಿಯಾಗುತ್ತದೆ. ಪಡೆಯುವ ಸಾಲವನ್ನು ಸದುಪಯೋಗಪಡಿಸಿಕೊಳ್ಳಬೇಕು. ಭೂಮಿಗೆ ಹಣ ಹಾಕುವುದರಿಂದ ವಾಪಸ್ ಹಣ ಮರಳಿ ಬರುತ್ತದೆ ಎಂಬ ನಂಬಿಕೆ ರೈತಾಪಿ ವರ್ಗದಲ್ಲಿ ಇದೆ. ಈ ನಂಬಿಕೆಯಿಂದ ರೈತರು ಸಹಕಾರ ಕ್ಷೇತ್ರದಲ್ಲಿ ಹಣವನ್ನು ಸಾಲವಾಗಿ ಪಡೆದು ಠೇವಣಿ ಸಹ ಮಾಡಿ ಆರ್ಥಿಕ ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದರು. ಉಪಾಧ್ಯಕ್ಷ ನಂಜುಂಡಪ್ಪ, ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ, ಕಲ್ಲೇಶಪ್ಪ, ನಟರಾಜ್, ವ್ಯವಸ್ಥಾಪಕ ಹನುಮಂತಪ್ಪ ಹಾಗೂ ರೈತರು ಇದ್ದರು.