ಪಾಕಿಸ್ತಾನದಲ್ಲಿ 4.2 ತೀವ್ರತೆಯ ಭೂಕಂಪ! | Earthquake

dk - 2025-05-05T172103.982
Published on

Earthquake : ಸೋಮವಾರ ಸಂಜೆ ನಾಲ್ಕರ ಸುಮಾರಿಗೆ ಪಾಕಿಸ್ತಾನದಲ್ಲಿ 4.2 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ(ಎನ್​ಸಿಎಸ್​​) ತಿಳಿಸಿದೆ.

ಯಾವುದೇ ಹಾನಿಗಳ ಬಗ್ಗೆ ಇದುವರೆಗೆ ವರದಿಯಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ. ಎನ್​ಸಿಎಸ್​ ಪ್ರಕಾರ, ಪಾಕಿಸ್ತಾನದಲ್ಲಿ 10 ಕಿ.ಮೀ ಆಳದಲ್ಲಿ 36.60N ಅಕ್ಷಾಂಶ ಮತ್ತು 72.81E ರೇಖಾಂಶದಲ್ಲಿ ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ಅಧಿಕಾರಿಗಳು ತಿಳಿಸಿದ್ದಾರೆ.

ಕಂಪನಗಳು ಅಫ್ಘಾನಿಸ್ತಾನದ ಗಡಿಯ ಸಮೀಪವಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಚಿತ್ರಾಲ್ ಜಿಲ್ಲೆಯ ಬಳಿ ಆಗಿದೆ ಎಂದು ತೋರಿಸಿದೆ.

ಅಲ್ಲದೆ ಸೋಮವಾರ ಅಪಘಾನಸ್ತಾನದಲ್ಲೂ ಕೆಲವಡೆ 4.2 ತೀವ್ರತೆಯ ಭೂಕಂಪನವಾಗಿದೆ ಎಂದು ಎನ್​ಸಿಎಸ್​ ತಿಳಿಸಿದೆ.

ಆಳವಿಲ್ಲದ ಭೂಕಂಪಗಳು ಆಳವಾದ ಭೂಕಂಪಗಳಿಗಿಂತ ಹೆಚ್ಚು ಅಪಾಯಕಾರಿಯಾಗಬಹುದು ಏಕೆಂದರೆ ಅವು ಭೂಮಿಯ ಮೇಲ್ಮೈಗೆ ಹತ್ತಿರದಲ್ಲಿ ಹೆಚ್ಚಿನ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಇದರಿಂದಾಗಿ ಬಲವಾದ ಭೂ ಕಂಪನ ಉಂಟಾಗುತ್ತದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net