

ಮೂರು ವರ್ಷದ ಕಂದಮ್ಮವೊಂದು ಮುದ್ದು ಮುದ್ದಾಗಿ ಹಾಡಿದ ದಿಲ್ ಹೈ ಚೋಟಾ ಸಾ... ಚೋಟಿ ಸಿ ಆಶಾ.... ಹಾಡು ನೆಟ್ಟಿಗರ ಮನಗೆದ್ದಿದೆ.
ರೊಜಾ ಹಿಂದಿ ಚಿತ್ರದ ಜನಪ್ರಿಯ ಗೀತೆಯನ್ನು ತನ್ನ ತಂದೆ ಮಾಧವ ಬೀನಾ ಅಗರವಾಲ್ ಅವರೊಂದಿಗೆ ಹಾಡಿರುವ ವೇದಾ ಅಗರವಾಲ್ ಈ ವಿಡಿಯೋ ಜಾಲತಾಣದಲ್ಲಿ ಅಪಾರ ಗಮನ ಸೆಳೆದಿದೆ.
ತನ್ನ ತಂದೆಯೊಂದಿಗೆ ವೇದಿಕೆ ಮೇಲಿರುವ ಪುಟಾಣಿ ವೇದಾ, ತಾನೊಬ್ಬಳೆ ಹಾಡುತ್ತೇನೆ. ನೀವು ಹಿಂದೆ ನಿಲ್ಲಿ ಎಂದು ತಂದೆಯನ್ನು ಸರಿಸುವಾಗ ಪ್ರೇಕ್ಷಕರು ಹರ್ಷೋದ್ಗಾರ ಮಾಡುತ್ತಾರೆ. ನಂತರ ತಾನೇ ಹಾಡಲು ಆರಂಭಿಸುತ್ತಾಳೆ. ಆಮೇಲೆ ಆಕೆಯ ತಂದೆಯೂ ಬಂದು ಹಾಡು ಹಾಡುತ್ತಾರೆ.
ಈ ವಿಡಿಯೋವನ್ನು ವೇದಾ ಅವಳ ಅಮ್ಮ ಮೇಘಾ ಅಗರವಾಲ್ ಟ್ವೀಟರ್ನಲ್ಲಿ ಶೇರ್ ಮಾಡಿದ್ದು 15 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 7.7 ಲಕ್ಷ ಮಂದಿ ಇದನ್ನು ವೀಕ್ಷಿಸಿದ್ದಾರೆ.
ನನ್ನ 3 ವರ್ಷದ ಮಗಳು ಆಕೆಯ ತಂದೆಯೊಂದಿಗೆ ಮೊದಲ ಬಾರಿಗೆ ವೇದಿಕೆಯಲ್ಲಿ ಹಾಡುತ್ತಿದ್ದಾಳೆ. ಆಕೆಯನ್ನು ಹರಸಿ ಎಂದು ಬರೆದುಕೊಂಡಿದ್ದಾರೆ ಮೇಘಾ ಅಗರವಾಲ್. (ಏಜೆನ್ಸೀಸ್)