ರೋಗಿಗಳ ಎದುರೇ ರೀಲ್ಸ್ ಮಾಡಿದ 38 ಜಿಮ್ಸ್ ವಿದ್ಯಾರ್ಥಿಗಳು ಸಸ್ಪೆಂಡ್!

GDG
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳು ನೃತ್ಯ ಮಾಡಿರುವುದು.
Published on

ಗದಗ: ರೋಗಿಗಳ ಆರೈಕೆ, ಚಿಕಿತ್ಸೆಯ ತಾಣವಾದ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಜಿಮ್ಸ್)ಯ ಆಸ್ಪತ್ರೆಯಲ್ಲಿ ರೋಗಿಗಳ ಎದುರೇ ವಿವಿಧ ಹಾಡುಗಳಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ 38 ವೈದ್ಯಕೀಯ ವಿದ್ಯಾರ್ಥಿಗಳು ಈಗ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.
ಪೇಶೆಂಟ್ ಜಸ್ಟ್ ಮೋಯೆ.. ಮೋಯೆ.., ನಟ ರವಿಚಂದ್ರನ್ ಅವರ ಪ್ರೇಮಲೋಕ ಚಿತ್ರದ ‘ಹಲೋ ಮೈ ಲವ್ಲಿ ಲೇಡಿ, ಹೂ ಆರ್ ಯು, ಹೂ ಆರ್ ಯು’ ಹಾಡಿಗೂ ನೃತ್ಯ ಮಾಡಿ ತಮ್ಮ ಇನ್‌ಸ್ಟ್ರಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಐಸಿಯು, ಶಿಶುವಿಗೆ ಆರೈಕೆ ವಿಭಾಗ, ರೋಗಿಗಳ ಘಟಕ, ಚೀಟಿ ಬರೆಯುವ ಕೊಠಡಿಗಳ ಮುಂದೆ ರೀಲ್ಸ್ ಚಿತ್ರೀಕರಿಸಲಾಗಿದೆ. ಈ ವಿಡಿಯೋಗಳು ಎಲ್ಲಡೆ ಸದ್ದು ಮಾಡಿವೆ. ನೆಟ್ಟಿಗರು ವಿದ್ಯಾರ್ಥಿಗಳ ವರ್ತನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆ ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಅಮಾನತು ರೀಲ್ಸ್ ಚಿತ್ರೀಕರಿಸಿದವರನ್ನು ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net