38.30 ಲಕ್ಷ ಕೋಟಿ ರೂ. ಡಿಜಿಟಲ್ ಪಾವತಿ; ಮೂರನೇ ತ್ರೈಮಾಸಿಕದಲ್ಲಿ ಸಾಧನೆ

Editorial
Published on

ನವದೆಹಲಿ: ಭಾರತದಲ್ಲಿ ಡಿಜಿಟಲ್ ಪಾವತಿಯ ವಹಿವಾಟು ದಿನೇ ದಿನೆ ಹೆಚ್ಚುತ್ತಿದ್ದು ಪ್ರಸ್ತಕ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಈವರೆಗೆ 2,300 ಕೋಟಿ ವಹಿವಾಟು ನಡೆದಿದ್ದು, 38.30 ಲಕ್ಷ ಕೋಟಿ ರೂ. ಪಾವತಿ ಆಗಿದೆ. ಈ ಪಾವತಿಗಳು ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಪೂರ್ವಪಾವತಿ ವೇದಿಕೆ, ಮೊಬೈಲ್ ವ್ಯಾಲೆಟ್​ಗಳ ಮೂಲಕ ನಡೆದಿದೆ ಎಂದು ವರ್ಲ್ಡ್​ಲೈನ್ ಇಂಡಿಯಾ ಡಿಜಿಟಲ್ ಪೇಮೆಂಟ್ ವರದಿ ತಿಳಿಸಿದೆ.

  • ಯುಪಿಐ ಮೂಲಕ 1,965 ಕೋಟಿ ವಹಿವಾಟು ನಡೆದಿದ್ದು, 32.50 ಲಕ್ಷ ಕೋಟಿ ರೂ. ಪಾವತಿ. ಕಳೆದ ಆರ್ಥಿಕ ಸಾಲಿನ 3ನೇ ತ್ರೖೆಮಾಸಿಕಕ್ಕೆ ಹೋಲಿಸಿದರೆ ಶೇ. 71 ವೃದ್ಧಿ.
  • ಅತಿ ಹೆಚ್ಚು ವಹಿವಾಟು ನಡೆದ ಯುಪಿಐ ಆಪ್ ಫೋನ್​ಪೇ, ಗೂಗಲ್ ಪೇ ಪೇಟಿಮ್
  • ಅತಿ ಹೆಚ್ಚು ಸ್ವೀಕೃತಿ/ಪಾವತಿಗಳು ನಡೆದ ಬ್ಯಾಂ ಎಸ್​ಬಿಐ, ಎಚ್​ಡಿಎಫ್​ಸಿ, ಬ್ಯಾಂಕ್ ಆಫ್ ಬರೋಡ, ಯೂನಿಯನ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್. ಯೆಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್.
  • ಒಟ್ಟು ವಹಿವಾಟಿನಲ್ಲಿ ಶೇ. 42 ವ್ಯಕ್ತಿಯಿಂದ ವ್ಯಾಪಾರಿ (ಪಿ2ಎಂ) ಮತ್ತು ವ್ಯಕ್ತಿಯಿಂದ ವ್ಯಕ್ತಿ (ಪಿ2ಪಿ) ಹೆಚ್ಚು ವಹಿವಾಟು ನಡೆದಿದೆ.
  • ಯುಪಿಐ ಮೂಲಕ ಪಿ2ಎಂಗೆ 738 ಕೋಟಿ ರೂ., ಪಿ2ಪಿಗೆ 2,576 ಕೋಟಿ ರೂ., ಪ್ರಿಪೇಯ್್ಡ ಕಾರ್ಡ್ ಮೂಲಕ 473 ಕೋಟಿ ರೂ. ಎಂ-ವ್ಯಾಲೆಟ್ ಮೂಲಕ 382 ಕೋಟಿ ರೂ., ಪಾವತಿ.
  • ಕ್ರೆಡಿಟ್ ಕಾರ್ಡ್ ಮೂಲಕ 4,833 ಕೋಟಿ ರೂ., ಡೆಬಿಟ್ ಕಾರ್ಡ್ ನಿಂದ 2,073 ಕೋಟಿ ರೂ. ಪಾವತಿ. ಈ ಎರಡೂ ಕಾರ್ಡ್​ಗಳಿಂದ ಸರಿಸುಮಾರು ಶೇ. 65 ವಹಿವಾಟು ನಡೆದಿದೆ.

ಚಿನ್ನ-ಬೆಳ್ಳಿ ದರ ಏರಿಕೆ: ದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ದರ 227 ರೂ. ಏರಿಕೆ ಆಗಿದ್ದು, 10 ಗ್ರಾಂ ಬೆಲೆ 54,386 ರೂ.ಗೆ ತಲುಪಿದೆ. ಬೆಳ್ಳಿ ಬೆಲೆ 1,166 ರೂ. ಹೆಚ್ಚಳ ಆಗಿದ್ದು, ಕೆ.ಜಿ. ದರ 62,270 ರೂ.ಗೆ ಜಿಗಿದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 52 ಪೈಸೆ ಕುಸಿತವಾಗಿದ್ದು, 81.85 ರೂ. ವಿನಿಮಯ ದರ ಸ್ಥಿರವಾಗಿದೆ.

ಸೇವಾ ವಲಯದಲ್ಲಿ ಚಟುವಟಿಕೆ ವೃದ್ಧಿ: ಎಸ್ ಆ್ಯಂಡ್ ಪಿ ಗ್ಲೋಬಲ್ ಬಿಡುಗಡೆ ಮಾಡಿರುವ ಖರೀದಿ ಮ್ಯಾನೇಜರ್ ಸೂಚ್ಯಂಕದಲ್ಲಿ (ಪಿಎಂಐ) ನವೆಂಬರ್​ನಲ್ಲಿ ಸೇವಾ ವಲಯದ ಚಟುವಟಿಕೆ ಶೇ. 56.4 ವೃದ್ಧಿಸಿದೆ. ಇದು 3 ತಿಂಗಳಲ್ಲೇ ಅತ್ಯಧಿಕ ಮಟ್ಟದ್ದಾಗಿದೆ. ಅಕ್ಟೋಬರ್​ನಲ್ಲಿ ಇದು ಶೇ. 55.1 ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net