ಬ್ರೆಜಿಲ್​ನಲ್ಲಿ ಭಾರಿ ಮಳೆ: 37 ಮೃತ್ಯು- 74 ಕ್ಕೂ ಹೆಚ್ಚು ಜನ ನಾಪತ್ತೆ

brezil rain
Published on

ರಿಯೊ ಗ್ರಾಂಡೆ ಡೊ ಸುಲ್: ಬ್ರೆಜಿಲ್‌ನ ದಕ್ಷಿಣ ರಾಜ್ಯ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ವಿವಿಧ ಅನಾಹುತಗಳಲ್ಲಿ 37ಮಂದಿ ಮೃತಪಟ್ಟಿದ್ದಾರೆ.

ಮಳೆಗೆ ಕಟ್ಟಡಗಳು ಕುಸಿದಿದ್ದು, ರಸ್ತೆಗಳು ಜಲಾವೃತವಾಗಿವೆ. ಮಣ್ಣಿನ ಕುಸಿತದ ಪರಿಣಾಮ 37 ಮಂದಿ ಮೃತಪಟ್ಟಿದ್ದಾರೆ. 74 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾರಿ ಮಳೆಗೆ ಮನೆಗಳು, ಸೇತುವೆಗಳು ಮತ್ತು ರಸ್ತೆಗಳು ಕುಸಿದಿದ್ದು, ಇವುಗಳ ಅವಶೇಷದಡಿ ಸಿಲುಕಿರುವವರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಪ್ರದೇಶದಲ್ಲಿ ಗವರ್ನರ್ ಎಡ್ವರ್ಡೊ ಲೀಟ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗವರ್ನರ್ ಲೀಟ್ ಅವರು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.‌

ಇನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು 626 ಸೈನಿಕರೊಂದಿಗೆ 12 ವಿಮಾನಗಳು, 45 ವಾಹನಗಳು ಮತ್ತು 12 ದೋಣಿಗಳನ್ನು ನಿಯೋಜನೆ ಮಾಡಲಾಗಿದೆ.

ಚೀನಾದಲ್ಲಿ ಭಾರಿ ಮಳೆ: ಇನ್ನು ಚೀನಾದಲ್ಲಿ ಭಾರಿ ಮಳೆಗೆ ಹೆದ್ದಾರಿ ಕುಸಿದಿದ್ದು, ಕಾರ್​ಗಳು ಮುಗುಚಿಬಿದ್ದು 48ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ದಕ್ಷಿಣ ಆಫ್ರಿಕಾದಲ್ಲೂ ಭಾರಿ ಮಳೆಯಾಗುತ್ತಿದ್ದು ನೂರಾರು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net