36 ಜನರಿಂದ ಏಕಕಾಲಕ್ಕೆ ಕೀ ಬೋರ್ಡ್ ವಾದನ

Music
Published on

ನಿನಾದ್ ಮ್ಯೂಸಿಕಲ್ ಟ್ರಸ್ಟ್ ವತಿಯಿಂದ ಆ.10ರಂದು ಸಂಜೆ 6ಕ್ಕೆ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಟ್ರಸ್ಟಿನ 36 ವಿದ್ಯಾರ್ಥಿಗಳು ಏಕಕಾಲಕ್ಕೆ ಕೀ ಬೋರ್ಡ್ ನುಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಎ.ಎಸ್.ಪ್ರಸನ್ನಕುಮಾರ್ ತಿಳಿಸಿದರು.

ಸಂಸ್ಥೆಯ 25ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಕನ್ನಡ, ಹಿಂದಿ ದೇಶಭಕ್ತಿ ಗೀತೆ, ಚಿತ್ರಗೀತೆಗಳನ್ನು ನುಡಿಸಲಿದ್ದಾರೆ. ಇವರಲ್ಲಿ 60 ವರ್ಷ ಮೇಲ್ಪಟ್ಟ ಮೂವರೂ ಸೇರಿದ್ದಾರೆ. ಕಾರ್ಯಕ್ರಮದಲ್ಲಿ ತಮ್ಮ ಹಿರಿಯ ಗುರುಗಳಾದ ಪಿ.ಜಿ.ವೆಂಕಟೇಶ್, ವಿದ್ಯಾರ್ಥಿಯೂ ಆದ ಕೆ.ಆರ್.ಆಸ್ಪತ್ರೆ ಇಎನ್‌ಟಿ ತಜ್ಞ ಡಾ.ಸುಭಾಷ್ ಅವರನ್ನು ಸನ್ಮಾನಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net