3550 ಕೋಟಿ ರೂ. ಹೂಡಿಕೆ ಒಪ್ಪಂದಗಳಿಗೆ ಸಹಿ: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಮ್ಮುಖದಲ್ಲಿ ಒಪ್ಪಂದ

Published on

ಬೆಂಗಳೂರು: ಉತ್ತರಾಖಂಡ್ ಜಾಗತಿಕ ಹೂಡಿಕೆದಾರರ ಶೃಂಗಸಭೆ-2023 ಅಂಗವಾಗಿ ಯುಎಇ ಪ್ರವಾಸದಲ್ಲಿರುವ ಉತ್ತರಾಖಂಡ್ ರಾಜ್ಯ ಸರ್ಕಾರವು ವಿವಿಧ ಗುಂಪುಗಳೊಂದಿಗೆ 3550 ಕೋಟಿ ರೂ. ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿತು.


ಶೃಂಗಸಭೆ ಹಿನ್ನೆಲೆಯಲ್ಲಿ ಎರಡನೇ ದಿನ ಯುಎಇ ಭೇಟಿ ನೀಡಿದ ಉತ್ತರಾಖಂಡ ಸರ್ಕಾರದ ನಿಯೋಗವು ಅಬುಧಾಬಿಯಲ್ಲಿ ವಿವಿಧ ಕೈಗಾರಿಕಾ ಗುಂಪುಗಳೊಂದಿಗೆ ಸಭೆ ನಡೆಸಿತು.


ಡಿಸೆಂಬರ್ ೮ ಮತ್ತು ೯ ರಂದು ಡೆಹ್ರಾಡೂನ್‌ನಲ್ಲಿ ಆಯೋಜಿಸಲಾಗಿರುವ ಶೃಂಗಸಭೆಗೆ ಮುಖ್ಯಮಂತ್ರಿ ಧಾಮಿ ಎಲ್ಲಾ ಕೈಗಾರಿಕಾ ಸಂಸ್ಥೆಗಳನ್ನು ಆಹ್ವಾನಿಸಿದ್ದಾರೆ. ಈ ಸಂದರ್ಭದಲ್ಲಿ ಕ್ಯಾಬಿನೆಟ್ ಸಚಿವ ಡಾ. ಧನ್‌ಸಿಂಗ್ ರಾವತ್ ಕೂಡ ಇದ್ದರು.


ಅಬುಧಾಬಿಯಲ್ಲಿ ಉತ್ತರಾಖಂಡ ಸರ್ಕಾರವು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಮ್ಮುಖದಲ್ಲಿ ೩೫೫೦ ಕೋಟಿ ರೂ.ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಲುಲು ಗ್ರೂಪ್‌ನೊಂದಿಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ೧೦೦೦ ಕೋಟಿ ರೂ. ಹೈಪರ್ ಮಾರ್ಕೆಟ್‌ನೊಂದಿಗೆ ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ೫೦೦ ಕೋಟಿ ಹೂಡಿಕೆ ಮತ್ತು ಫುಡ್ ಪಾರ್ಕ್‌ನಲ್ಲಿ ೨೫೦ ಕೋಟಿ ರೂ.ಹೂಡಿಕೆ, ಮಧ್ಯಪ್ರಾಚ್ಯದಲ್ಲಿ ವೈದ್ಯಕೀಯ ಕ್ಷೇತ್ರವಾದ ಎಸಿಟಿ ಸೌಲಭ್ಯಗಳಿಗೆ ೧೫೦೦ ರೂ. ಮತ್ತು ಫಾರ್ಮಾ ವಲಯದಲ್ಲಿ ಹೂಡಿಕೆಗಾಗಿ ರೀಜೆಂಟ್ ಗ್ಲೋಬಲ್‌ನೊಂದಿಗೆ ೩೦೦ ಕೋಟಿ ರೂ. ಇದಕ್ಕೂ ಮುನ್ನ ಯುಎಇ ಪ್ರವಾಸದ ಮೊದಲ ದಿನವೇ ಸಿಎಂ ಧಾಮಿ ಅವರ ಸಮ್ಮುಖದಲ್ಲಿ ೧೧೯೨೫ ಕೋಟಿ ರೂ. ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಒಟ್ಟಾರೆಯಾಗಿ, ಯುಎಇಯಲ್ಲಿ ೧೫,೪೭೫ ಕೋಟಿ ರೂಪಾಯಿ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.


ಐಸಿಎಐ ಆಯೋಜಿಸಿದ್ದ ಕಾರ್ಯಕ್ರಮ
ಅಬುಧಾಬಿಯಲ್ಲಿನ ಇನ್‌ಸ್ಟಿಟ್ಯೂಟ್ ಆ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಲ್ಲಿ (ಐಸಿಎಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಧಾಮಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವದಲ್ಲೇ ಅತಿ ದೊಡ್ಡ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಸ್ಥೆಯ ಶ್ರೇಷ್ಠ ಸದಸ್ಯರ ನಡುವೆ ಬಂದು ಮಾತನಾಡುತ್ತಿರುವುದು ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.
ಒಂದೆಡೆ ಕೇದಾರನಾಥ, ಬದರಿನಾಥ ಧಾಮ, ಜಾಗೇಶ್ವರ ಮೊದಲಾದ ದೇಗುಲಗಳು ನೆಲೆಸಿದ್ದರೆ, ಮತ್ತೊಂದೆಡೆ ನಮ್ಮ ರಾಜ್ಯವು ಪುಣ್ಯ ನದಿಗಳ ಉಗಮ ಸ್ಥಾನವೂ ಹೌದು. ಉತ್ತರಾಖಂಡವು, ದೇಶ ಮತ್ತು ವಿಶ್ವದಲ್ಲಿಯೇ ದೇವರ ನಾಡು ಎಂದು ಗುರುತಿಸಿಕೊಂಡಿದೆ. ಗಂಗಾ ಮತ್ತು ಯಮುನಾ, ಸಾಂಸ್ಕೃತಿಕ, ಪ್ರಾಕೃತಿಕ ಮತ್ತು ಆಧ್ಯಾತ್ಮಿಕ ಸೌಂದರ್ಯವನ್ನು ಉಳಿಸಿ ರಾಜ್ಯದ ಅಭಿವೃದ್ಧಿಯ ಹಾದಿಯನ್ನು ಆರಿಸಿಕೊಂಡಿದೆ ಎಂದರು.
ಸರಳೀಕರಣ, ಪರಿಹಾರ, ವಿಲೇವಾರಿ ಮತ್ತು ತೃಪ್ತಿಯನ್ನು ನಮ್ಮ ಮೂಲ ಮಂತ್ರವೆಂದು ಪರಿಗಣಿಸಿದ್ದೇವೆ. ಪ್ರವಾಸೋದ್ಯಮ, ಸ್ವಾಸ್ಥ್ಯ ಮತ್ತು ಆತಿಥ್ಯ ಉದ್ಯಮಗಳ ಜತೆಗೆ ಉತ್ತರಾಖಂಡದಲ್ಲಿ ಅನೇಕ ಹೊಸ ಮತ್ತು ಸಾಂಪ್ರದಾಯಿಕವಲ್ಲದ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನ ಮತ್ತು ಕೇಂದ್ರ ಸರ್ಕಾರದ ಸಹಕಾರದಿಂದ ೧.೫೦ ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ಯೋಜನೆಗಳು ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕೆ ಮಂಜೂರಾಗಿದೆ ಎಂದರು.
ಈ ಸಂದರ್ಭದಲ್ಲಿ ಸಚಿವ ಡಾ.ಧನ್ ಸಿಂಗ್ ರಾವತ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆನಂದ ಬರ್ಧನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಆರ್.ಮೀನಾಕ್ಷಿ ಸುಂದರಂ, ಕಾರ್ಯದರ್ಶಿ ಶೈಲೇಶ್ ಬಗೌಲಿ, ಕೈಗಾರಿಕಾ ಕಾರ್ಯದರ್ಶಿ ವಿನಯ್ ಶಂಕರ್ ಪಾಂಡ್ಯ, ಕೈಗಾರಿಕಾ ಮಹಾನಿರ್ದೇಶಕ ರೋಹಿತ್ ಮೀನಾ ಸೇರಿದಂತೆ ನಿಯೋಗದ ಸದಸ್ಯರು ಮತ್ತು ಐಸಿಎಐ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net