ಒಂದು ತಿಂಗಳ ಅವಧಿಯಲ್ಲಿ 351 ಮಂದಿಯ ಬಂಧನ

Crime Logo
Published on

ಬೆಂಗಳೂರು : ಒಂದು ತಿಂಗಳ ಅವಧಿಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುತ್ತಿದ್ದ ಆರೋಪದ ಮೇರೆಗೆ 351 ಮಂದಿಯನ್ನು ಬಂಧಿಸಿರುವ ಸಿಸಿಬಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು ೮.೬೩ ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸೆಪ್ಟೆಂಬರ್ ತಿಂಗಳಿನಲ್ಲಿ ನಗರದ ವಿವಿಧ ಠಾಣೆಗಳಲ್ಲಿ ೨೩೭ ಪ್ರಕರಣಗಳು ದಾಖಲಾಗಿದ್ದು, ೨೭ ಅಂತರಾಜ್ಯ ಮತ್ತು ೩೩೮ ರಾಷ್ಟ್ರೀಯ ಮತ್ತು ೧೩ ಮಂದಿ ವಿದೇಶಿ ಆರೋಪಿಗಳನ್ನು ಬಂಧಿಸಲಾಗಿದೆ. ಮಾದಕವಸ್ತು ಮಾರಾಟ ಮಾಡುತ್ತಿದ್ದ ಡ್ರಗ್‌ಪೆಡ್ಲರ್‌ಗಳ ವಿರುದ್ಧ ೪೭ ಪ್ರಕರಣಗಳನ್ನು ದಾಖಲಿಸಿದ್ದು, ಅಂದಾಜು ೮.೬೩ ಕೋಟಿ ಮೌಲ್ಯದ ೨೯೩. ಕೆ.ಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಗಾಂಜಾ ೨೮೮ ಕೆ.ಜಿ, ಹಾಶಿಷ್ ಆಯಿಲ್ ೪೫೦ ಗ್ರಾಂ, ಕೋಕೈನ್ ೧೭೩ ಗ್ರಾಂ, ಎಂ.ಡಿ.ಎಂ.ಎ-೨.೨೪೨ ಕೆ.ಜಿ, ಹೆರಾಯಿನ್ ೬೧ ಗ್ರಾಂ, ೨೩ ಗ್ರಾಂ ಆಂಪೆಟಮೈನ್, ಮೆಪೆಡ್ರಾನ್ ೧.೮೭೦ ಕೆ.ಜಿ ಮತ್ತು ೫೬೭ ಎಕ್ಸ್‌ಟೆಸಿ ಮಾತ್ರೆ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net