ಸ್ಪೋರ್ಟ್ಸ್ ಸೆಂಟರ್​ಗೆ ನುಗ್ಗಿದ ಕಾರು! 35 ಮಂದಿ ಸ್ಥಳದಲ್ಲೇ ದುರ್ಮರಣ, 43 ಜನರು ಗಂಭೀರ

ವಿಜಯವಾಣಿ - 2024-11-12T182338.791
Published on

China: ದಕ್ಷಿಣ ಚೀನಾದ ಝುಹೈ ನಗರದ ಕ್ರೀಡಾ ಕೇಂದ್ರದಲ್ಲಿ ವ್ಯಾಯಾಮ ಮಾಡುತ್ತಿದ್ದ ಸಾರ್ವಜನಿಕರ ಮೇಲೆ ತನ್ನ ಕಾರನ್ನು ಹರಿಸಿದ ಚಾಲಕನೊಬ್ಬ, 35 ಜನರ ಸಾವಿಗೆ ಕಾರಣನಾಗಿದ್ದಾನೆ. ಘಟನೆಯಲ್ಲಿ 43 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನಗರದಲ್ಲಿ ವಾರ್ಷಿಕವಾಗಿ ಆಯೋಜಿಸಲಾಗುವ ಪೀಪಲ್ಸ್ ಲಿಬರೇಶನ್ ಆರ್ಮಿ ದೇಶದ ಪ್ರಮುಖ ವಾಯುಯಾನ ಪ್ರದರ್ಶನ ನಡೆಯುವ ಹಿಂದಿನ ದಿನ ಈ ಭೀಕರ ಘಟನೆ ಸಂಭವಿಸಿದೆ. ಸೋಮವಾರ ರಾತ್ರಿ ನಡೆದ ದಾಳಿಯ ನಂತರ ದಕ್ಷಿಣ ಚೀನಾದ ಝುಹೈ ನಗರದ ಕ್ರೀಡಾ ಕೇಂದ್ರದಲ್ಲಿ 62 ವರ್ಷದ ವ್ಯಕ್ತಿಯನ್ನು ಸದ್ಯ ಪೊಲೀಸರು ಬಂಧಿಸಿದ್ದು, ಇದು ಕೊಲೆ ಸಂಚೋ ಅಥವಾ ಅಪಘಾತವೋ? ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net