ಅಕ್ಟೋಬರ್​ನಲ್ಲಿ ಕೆಐಎ ಮೂಲಕ 34 ಸಾವಿರ ಟನ್​ ಸರಕು ಸಾಗಣೆ

corgo (1)
Published on

ಅದೇ ರೀತಿ ಅಕ್ಟೋಬರ್​ 22ರಂದು ಒಂದೇ ದಿನ 52 ವಾಯುಸಂಚಾರ ಚಲನೆ (ಎಟಿಎಂ) ಮಾಡಲಾಯಿತು. ಅದು ನೂತನ ದಾಖಲೆಯಾಗಿದೆ. ಅಲ್ಲದೆ, ಆ ದಿನ 1,359 ಮೆಟ್ರಿಕ್​ ಟನ್​ ಸರಕು ಸಾಗಣೆ ಮಾಡಲಾಗಿದೆ.

ಕರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ಕೆಐಎ ಮೂಲಕ ಪ್ರಯಾಣಿಕರ ಸಂಚಾರಕ್ಕಿಂತ ಸರಕು ಸಾಗಣೆ ಪ್ರಮಾಣ ಹೆಚ್ಚಾಗಿದೆ. ಅದರಂತೆ ತಿಂಗಳಿನಿಂದ ತಿಂಗಳಿಗೆ ಸರಕು ಸಾಗಣೆ ಹೆಚ್ಚುತ್ತಿದ್ದು, ಅಕ್ಟೋಬರ್​ ಒಂದೇ ತಿಂಗಳಲ್ಲಿ 34,339 ಮೆಟ್ರಿಕ್​ ಟನ್​ ಸರಕು ಸಾಗಿಸಲಾಗಿದೆ. ಅದರಲ್ಲಿ 8,117 ಮೆಟ್ರಿಕ್​ ಟನ್​ ವಿದೇಶಗಳಿಗೆ ಕಳುಹಿಸಿದ್ದಾಗಿದೆ. ಅದರಲ್ಲಿ ಶೇ. 12 ಬೇಗನೆ ಹಾಳಾಗುವಂತಹ ಸರಕುಗಳಾಗಿವೆ. ವಿದೇಶಗಳ ನಗರಗಳ ಪೈಕಿ ಕತಾರ್​ ದೇಶದ ದೋಹಾಕ್ಕೆ ಅತಿಹೆಚ್ಚು 1,095 ಮೆಟ್ರಿಕ್​ ಟನ್​ ಸರಕನ್ನು ಕಳುಹಿಸಲಾಗಿದೆ.

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಕೆಐಎ)ದ ಮೂಲಕ ಅಕ್ಟೋಬರ್​ನಲ್ಲಿ 34 ಸಾವಿರ ಮೆಟ್ರಿಕ್​ ಟನ್​ ಸರಕು ಸಾಗಣೆ ಮಾಡಿದ್ದು, ಕಳೆದ 26 ತಿಂಗಳಲ್ಲಿ ಇದು ಅತಿಹೆಚ್ಚಿನ ಸರಕಿನ ಪ್ರಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net