ಚಂಡೀಗಢ: ಕರೊನಾ ವೈರಸ್ ತಡೆಗೆ ಸರ್ಕಾರ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಹಾಗಿದ್ದರೂ ಬೇರೆ ದೇಶಗಳಿಂದ ಭಾರತಕ್ಕೆ ಬರುತ್ತಿರುವ ಪ್ರಯಾಣಿಕರಿಂದ ಕರೊನಾ ಸಮಸ್ಯೆ ಹೆಚ್ಚುತ್ತಲೇ ಸಾಗಿದೆ. ಪಂಜಾಬ್ಗೆ ಕರೊನಾ ಪೀಡಿತ ದೇಶಗಳಿಂದ ಸಾವಿರಾರು ಜನರು ಬಂದಿದ್ದು, ಅದರಲ್ಲಿ 335 ಜನರು ವೈದ್ಯಕೀಯ ಪರೀಕ್ಷೆ ನಡೆಸುವುದಕ್ಕೆ ಸಿಕ್ಕಿಲ್ಲ ಎಂದು ಅಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಮಾರ್ಚ್ 13ರವರೆಗೆ ಪಂಜಾಬ್ನ ವಿಮಾನ ನಿಲ್ದಾಣಗಳಿಗೆ ಒಟ್ಟು 6,692 ಜನರು ಕರೊನಾ ಪೀಡಿತ ದೇಶಗಳಿಂದ ಬಂದಿಳಿದಿದ್ದಾರೆ. ಈ ಪೈಕಿ 6011 ಜನರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಲಾಗಿದೆ. ಉಳಿದಂತೆ 353 ಜನರನ್ನು ಜಿಲ್ಲಾ ವೈದ್ಯಕೀಯ ಕೇಂದ್ರಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಆದರೆ ಇನ್ನುಳಿದ 335 ಜನರು ವೈದ್ಯಕೀಯ ತಪಾಸಣೆಗೆ ಲಭ್ಯವಾಗಿಲ್ಲ. ಈ ಪ್ರಯಾಣಿಗರು ಎಲ್ಲಿದ್ದಾರೆ ಎನ್ನುವ ಮಾಹಿತಿಯೂ ಲಭಿಸಿಲ್ಲ.
ಕರೊನಾ ಪೀಡಿತ ದೇಶಗಳಿಂದ ಬಂದಿರುವ ಪ್ರಯಾಣಿಗರ ಪೈಕಿ 2241 ಪ್ರಯಾಣಿಗರನ್ನು ತಪಾಸಣೆಯಲ್ಲಿಡಲಾಗಿದೆ. ಅದರಲ್ಲಿ ಏಳು ಜನರಲ್ಲಿ ಮಾ.13ರಂದು ಕರೊನಾ ಗುಣಲಕ್ಷಣಗಳು ಕಂಡುಬಂದಿವೆ ಎಂದು ಇಲಾಖೆ ತಿಳಿಸಿದೆ.
ಕರೊನಾ ಪೀಡಿತ ದೇಶಗಳಿಂದ ಪಂಜಾಬ್ಗೆ ಬಂದು ನಾಪತ್ತೆಯಾಗಿರುವ 335 ಪ್ರಯಾಣಿಗರು ಪಂಜಾಬ್ನಲ್ಲಿಯೇ ಇದ್ದಾರಾ ಅಥವಾ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದ್ದಾರಾ ಎನ್ನುವುದರ ಕುರಿತಾಗಿಯೂ ಯಾವುದೇ ಮಾಹಿತಿ ಇಲ್ಲ. (ಏಜೆನ್ಸೀಸ್)