24ಗಂಟೆಯಲ್ಲಿ 317 ಹೊಸ ಕರೊನಾ ಪ್ರಕರಣಗಳು; 108 ಮಂದಿ ಅಂತಾರಾಜ್ಯ ಪ್ರಯಾಣಿಕರು

Covid death
Published on

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 317 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 7530ಕ್ಕೆ ಏರಿದೆ.

ಇಂದು 322 ಮಂದಿ ಕರೊನಾದಿಂದ ಗುಣಮುಖರಾಗಿ ಡಿಸ್​ಚಾರ್ಜ್​ ಆಗಿದ್ದಾರೆ. ಏಳು ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ ಡಿಸ್​ಚಾರ್ಜ್ ಆದವರ ಸಂಖ್ಯೆ 4456 ಆಗಿದ್ದು, ಮೃತಪಟ್ಟವರ ಸಂಖ್ಯೆ 94ಕ್ಕೆ ಏರಿದೆ. ಸಕ್ರಿಯ ಕರೊನಾ ಪ್ರಕರಣಗಳ ಸಂಖ್ಯೆ 2976ರಷ್ಟಿದೆ.

ಇಂದು ಪತ್ತೆಯಾದ ಸೋಂಕಿತರಲ್ಲಿ 78 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು. 108 ಜನರು ಅಂತಾರಾಜ್ಯ ಪ್ರಯಾಣಿಕರು ಎಂದು ಗುರುತಿಸಲಾಗಿದೆ.

ಯಾವ ಜಿಲ್ಲೆಗಳಲ್ಲಿ ಎಷ್ಟು..?ಇಲ್ಲಿದೆ ಪಟ್ಟಿ
  • ದಕ್ಷಿಣ ಕನ್ನಡ-79
  • ಕಲಬುರಗಿ-63
  • ಬಳ್ಳಾರಿ-53
  • ಬೆಂಗಳೂರು ನಗರ-47
  • ಧಾರವಾಡ-8
  • ಉಡುಪಿ ಮತ್ತು ಶಿವಮೊಗ್ಗ ತಲಾ 7
  • ಯಾದಗಿರಿ, ರಾಯಚೂರು, ಉತ್ತರ ಕನ್ನಡ ತಲಾ 6
  • ಹಾಸನ-5
  • ವಿಜಯಪುರ, ಮೈಸೂರು, ಗದಗ, ರಾಮನಗರ, ಚಿಕ್ಕಮಗಳೂರು, ಕೊಪ್ಪಳ ತಲಾ 4
  • ಬೆಳಗಾವಿ-3
  • ಬೀದರ್​-2
  • ತುಮಕೂರು-1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net