8 ಲೋಕಸಭಾ ಕ್ಷೇತ್ರಗಳಲ್ಲಿ ಎರಡು ಬ್ಯಾಲೆಟ್ ಯುನಿಟ್ ಬಳಕೆ, 14 ಕ್ಷೇತ್ರಗಳಲ್ಲಿ 30,602 ಮತಗಟ್ಟೆ ಸ್ಥಾಪನೆ

Voting machine
Published on

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ 8 ಲೋಕಸಭಾ ಕ್ಷೇತ್ರದಲ್ಲಿ ಎರಡು ಬ್ಯಾಲೆಟ್ ಯುನಿಟ್ ಬಳಕೆ ಮಾಡಲಾಗುತ್ತದೆ.

ಈ ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಎರಡು ಬ್ಯಾಲೆಟ್ ಯುನಿಟ್ ಬಳಕೆ ಮಾಡಬೇಕಿದೆ. ಉಳಿದ 6 ಕ್ಷೇತ್ರದಲ್ಲಿ 1 ಬ್ಯಾಲೆಟ್ ಯುನಿಟ್ ಬಳಕೆ ಮಾಡಲಾಗುತ್ತದೆ.

14 ಕ್ಷೇತ್ರಗಳಲ್ಲಿ ಒಟ್ಟು 30,602 ಮತಗಟ್ಟೆಗಳಲ್ಲಿ 60,525 ಬ್ಯಾಲೆಟ್ ಯುನಿಟ್, 38,782 ಕಂಟ್ರೋಲ್ ಯೂನಿಟ್ ಹಾಗೂ 40,840 ವಿ.ವಿ.ಪ್ಯಾಟ್ ಬಳಕೆ ಮಾಡಲಾಗುತ್ತದೆ. ಈ ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಯಾವ ಕ್ಷೇತ್ರ ಎಷ್ಟು ಮತಗಟ್ಟೆ:

ಉಡುಪಿ ಚಿಕ್ಕಮಗಳೂರಿನಲ್ಲಿ 1842 ಮತಗಟ್ಟೆಗಳಿದ್ದು, 2,281 ಬ್ಯಾಲೆಟ್ ಯುನಿಟ್, 2281 ಕಂಟ್ರೋಲ್ ಯುನಿಟ್, 2397 ವಿ.ವಿ.ಪ್ಯಾಟ್ ಬಳಸಲಾಗುತ್ತದೆ. ಇಲ್ಲಿ 10 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಹಾಸನದಲ್ಲಿ 2221 ಮತಗಟ್ಟೆ, 2802 ಬ್ಯಾಲೆಟ್ ಯುನಿಟ್, 2397 ಕಂಟ್ರೋಲ್ ಯುನಿಟ್, 3010 ವಿ.ವಿ.ಪ್ಯಾಟ್ ಬಳಕೆ ಮಾಡಲಾಗುವುದು. ಇಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ದಕ್ಷಿಣ ಕನ್ನಡದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿ

ದಕ್ಷಿಣ ಕನ್ನಡದಲ್ಲಿ 1876 ಮತಗಟ್ಟೆಗಳಿದ್ದು, 2345 ಬ್ಯಾಲೆಟ್ ಯುನಿಟ್, 2345 ಕಂಟ್ರೋಲ್ ಯುನಿಟ್, 2449 ವಿ.ವಿ.ಪ್ಯಾಟ್ ಬಳಕೆ ಮಾಡಲಾಗುತ್ತದೆ. 9 ಅಭ್ಯರ್ಥಿಗಳು ಹುರಿಯಾಳಾಗಿದ್ದಾರೆ. ಚಿತ್ರದುರ್ಗದಲ್ಲಿ 20 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 2168 ಮತಗಟ್ಟೆ ಸ್ಥಾಪಿಸಲಾಗುತ್ತದೆ. 5296 ಬ್ಯಾಲೆಟ್ ಯುನಿಟ್, 2681 ಕಂಟ್ರೋಲ್ ಯುನಿಟ್, 2814 ವಿ.ವಿ.ಪ್ಯಾಟ್ ಬಳಕೆಯಾಗಲಿವೆ.

ತುಮಕೂರಿನಲ್ಲಿ 18 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. 1846 ಮತಗಟ್ಟೆಗಳಿರಲಿವೆ. 4474 ಬ್ಯಾಲೆಟ್ ಯುನಿಟ್, 2212 ಕಂಟ್ರೋಲ್ ಯುನಿಟ್, 2397 ವಿ.ವಿ.ಪ್ಯಾಟ್‌ಗಳಿರುತ್ತವೆ.

ಮಂಡ್ಯದಲ್ಲಿ 14 ಮಂದಿ ಕಣದಲ್ಲಿದ್ದು, 2076 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. 2565 ಬ್ಯಾಲೆಟ್ ಯುನಿಟ್, 2565 ಕಂಟ್ರೋಲ್ ಯುನಿಟ್ 2718 ವಿ.ವಿ.ಪ್ಯಾಟ್ ಇರಲಿವೆ.

ಮೈಸೂರು ಕ್ಷೇತ್ರದಲ್ಲಿ 18 ಮಂದಿ ಅಭ್ಯರ್ಥಿಗಳಿದ್ದು, 2202 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. 5556 ಬ್ಯಾಲೆಟ್ ಯುನಿಟ್, 2841 ಕಂಟ್ರೋಲ್ ಯುನಿಟ್, 3039 ವಿ.ವಿ.ಪ್ಯಾಟ್ ಬಳಸಲಾಗುವುದು.

ಚಾಮರಾಜನಗರ 2727 ವಿ.ವಿ.ಪ್ಯಾಟ್ ಬಳಕೆ

ಚಾಮರಾಜನಗರದಲ್ಲಿ 14 ಅಭ್ಯರ್ಥಿಗಳು ಹುರಿಯಾಳಾಗಿದ್ದಾರೆ. 2000 ಮತಗಟ್ಟೆಗಳಿವೆ. 2557 ಬ್ಯಾಲೆಟ್ ಯುನಿಟ್, 2557 ಕಂಟ್ರೋಲ್ ಯುನಿಟ್, 2727 ವಿ.ವಿ.ಪ್ಯಾಟ್ ಅಳವಡಿಸಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 15 ಮಂದಿ ಸ್ಪರ್ಧೆಯಲ್ಲಿದ್ದಾರೆ. 2829 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. 3678 ಬ್ಯಾಲೆಟ್ ಯುನಿಟ್ 3678 ಕಂಟ್ರೋಲ್ ಯುನಿಟ್, 3770 ವಿ.ವಿ.ಪ್ಯಾಟ್ ಅಳವಡಿಸಲಾಗುವುದು.

ಬೆಂಗಳೂರು ಉತ್ತರದಲ್ಲಿ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿ 2911 ಮತಗಟ್ಟೆಗಳಿರುತ್ತವೆ. 7406 ಬ್ಯಾಲೆಟ್ ಯುನಿಟ್, 3780 ಕಂಟ್ರೋಲ್ ಯುನಿಟ್, 3932 ವಿ.ವಿ.ಪ್ಯಾಟ್ ಬಳಕೆ ಮಾಡಲಾಗುತ್ತದೆ.

ಬೆಂಗಳೂರು ಕೇಂದ್ರದಲ್ಲಿ 2125 ಮತಗಟ್ಟೆ

ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 24 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 2125 ಮತಗಟ್ಟೆ

ಸ್ಥಾಪಿಸಲಾಗುತ್ತದೆ. 5478 ಬ್ಯಾಲೆಟ್ ಯುನಿಟ್, 2861 ಕಂಟ್ರೋಲ್ ಯುನಿಟ್, 2867 ವಿ.ವಿ.ಪ್ಯಾಟ್ ಬಳಕೆ ಮಾಡಲಾಗುತ್ತದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. 2120 ಮತಗಟ್ಟೆಗಳಿರಲಿವೆ. 5166 ಬ್ಯಾಲೆಟ್ ಯುನಿಟ್, 2601 ಕಂಟ್ರೋಲ್ ಯುನಿಟ್, 2856 ವಿ.ವಿ.ಪ್ಯಾಟ್ ಇರಲಿವೆ.

ಚಿಕ್ಕಬಳ್ಳಾಪುರದಲ್ಲಿ ಹೆಚ್ಚು ಅಭ್ಯರ್ಥಿಗಳು

ಚಿಕ್ಕಬಳ್ಳಾಪುರದಲ್ಲಿ 29 ಮಂದಿ ಸ್ಪರ್ಧಿಸಿದ್ದಾರೆ. 2326 ಮತಗಟ್ಟೆಗಳಿವೆ. 5812 ಬ್ಯಾಲೆಟ್ ಯುನಿಟ್, 2964 ಕಂಟ್ರೋಲ್ ಯುನಿಟ್, 3077 ವಿ.ವಿ.ಪ್ಯಾಟ್ ಹಾಗೂ ಕೋಲಾರದಲ್ಲಿ 18 ಅಭ್ಯರ್ಥಿಗಳಿದ್ದು, 2060 ಮತಗಟ್ಟೆಗಳಿರುತ್ತವೆ. 5109 ಬ್ಯಾಲೆಟ್ ಯುನಿಟ್, 2614 ಕಂಟ್ರೋಲ್ ಯುನಿಟ್ ಹಾಗೂ 2787 ವಿ.ವಿ.ಪ್ಯಾಟ್ ಬಳಕೆ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net