ಕಳೆದ 3 ವರ್ಷದಲ್ಲಿ 12.57 ಕೋಟಿ ರೂ. ಮೌಲ್ಯದ 3,014 ಮೆ. ಟನ್ ರಸಗೊಬ್ಬರವನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಸಂಬಂಧಿಸಿ 400 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಕಾರ್ಖಾನೆ ಬಳಕೆಗಾಗಿ ಸಾಗಿಸುತ್ತಿದ್ದ 541 ಮೆ. ಟನ್ ರಿಯಾಯಿತಿ ದರದ ಯೂರಿಯಾವನ್ನು ವಶಕ್ಕೆ ಪಡೆದಿದ್ದು, 24 ಪ್ರಕರಣಗಳಲ್ಲಿ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಜತೆಗೆ 95 ರಸಗೊಬ್ಬರ ಪರವಾನಗಿ ಅಮಾನತು ಮಾಡಿದ್ದು, 87 ಪರವಾನಗಿಗಳನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.