

ನವದೆಹಲಿ: ನಾನಾ ಕಾರಣಕ್ಕೆ ನಾನಾ ಸಂಗತಿಗಳು ಗಿನ್ನೆಸ್ ರೆಕಾರ್ಡ್ಸ್ನಲ್ಲಿ ದಾಖಲಾಗುತ್ತವೆ. ಅದೇ ರೀತಿ ಇಲ್ಲೊಂದು ಶ್ವಾನ ಕೂಡ ಗಿನ್ನೆಸ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ. ಆ ಮೂಲಕ ಇದು ಜಗತ್ತಿನ ಅತ್ಯಂತ ಹಳೇ ನಾಯಿ ಎನಿಸಿಕೊಂಡಿದೆ.
ರಫೀರೊ ಡೊ ಅಲೆಂಟೆಜೊ (Rafeiro do Alentejo) ಎಂಬ ಪೋರ್ಚುಗೀಸ್ ತಳಿಯ ಬಾಬಿ ಎಂಬ ಈ ನಾಯಿಗೆ ಸದ್ಯ 30 ವರ್ಷ ವಯಸ್ಸಾಗಿದ್ದು, ಇದು ವಿಶ್ವದ ಅತ್ಯಂತ ವಯಸ್ಕ ನಾಯಿ ಎಂಬ ಕಾರಣಕ್ಕೆ ಗಿನ್ನೆಲೆ ರೆಕಾರ್ಡ್ಸ್ ಪಟ್ಟಿಗೆ ಸೇರಿದೆ. ಸಾಮಾನ್ಯವಾಗಿ 12ರಿಂದ 14 ವರ್ಷಗಳ ಕಾಲವಷ್ಟೇ ಬದುಕಿರುವ ಈ ನಾಯಿ, 30 ವರ್ಷವಾದರೂ ಜೀವಂತ ಇರುವುದಕ್ಕೆ ದಾಖಲೆ ಎನಿಸಿಕೊಂಡಿದೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ದಾಖಲೆ ಪ್ರಕಾರ 2023ರ ಫೆ. 1ಕ್ಕೆ ಬಾಬಿ 30 ವರ್ಷ 266 ದಿನಗಳ ಜೀವಿತಾವಧಿಯನ್ನು ಪೂರ್ಣಗೊಳಿಸಿದೆ. ಸದ್ಯ ಇದು ಪೋರ್ಚುಗಲ್ನಲ್ಲಿರುವ ಕೋಸ್ಟ್ ಕುಟುಂಬದಲ್ಲಿದೆ. ಆಸ್ಟ್ರೇಲಿಯನ್ ಕ್ಯಾಟಲ್ ಡಾಗ್ ಬ್ಲ್ಯೂ (1910-1939) 29 ವರ್ಷ 5 ತಿಂಗಳ ಕಾಲ ಬದುಕಿದ್ದು, ಈ ಹಿಂದಿನ ದಾಖಲೆ ಇದರ ಪಾಲಾಗಿತ್ತು. ಅದನ್ನು ಬಾಬಿ ಈಗ ಮುರಿದಿದೆ.