ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ 30 ಮಂಗಗಳ ಶವ ಪತ್ತೆ! ರಾಜಕೀಯ ತಿರುವು ಪಡೆಯಿತು ಕೋತಿಗಳ ಸಾವು

WhatsApp-Image-2024-04-04-at-12.32.10-PM
Published on

ಕುಡಿಯುವ ನೀರಿನ ಟ್ಯಾಂಕ್​ನಲ್ಲಿ 30 ಕೋತಿಗಳ ಶವ ಪತ್ತೆಯಾಗಿದ್ದು, ಮಂಗಗಳ ಮಾರಣಹೋಮಕ್ಕೆ ಕೆರಳಿದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖಂಡ ಮತ್ತು ತೆಲಂಗಾಣ ಮಾಜಿ ಸಚಿವ ಕೆ.ಟಿ. ರಾಮರಾವ್ (ಕೆಟಿಆರ್) ನಲ್ಗೊಂಡಾದಲ್ಲಿನ ಟ್ಯಾಂಕ್‌ನಲ್ಲಿ ಸತ್ತ ಕೋತಿಗಳ ಸಾವಿಗೆ ಕಾರಣವೇನು? ಎಂದು ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೆಟಿಆರ್, "ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ಆರೋಗ್ಯಕ್ಕಿಂತ ರಾಜಕೀಯಕ್ಕೆ ಹೆಚ್ಚು ಆದ್ಯತೆ ನೀಡಿದ್ದರಿಂದ ಆಡಳಿತವು ತೀವ್ರ ಹದಗೆಟ್ಟಿದೆ. ತೆಲಂಗಾಣ ಮುನ್ಸಿಪಲ್ ಇಲಾಖೆಯಲ್ಲಿ ಎಂತಹ ನಾಚಿಕೆಗೇಡಿನ ಸ್ಥಿತಿ ಉಂಟಾಗಿದೆ. ಅನುಸರಿಸಬೇಕಾದ ಪ್ರಮಾಣಿತ ಪ್ರೋಟೋಕಾಲ್‌ಗಳಾದ ನಿಯತಕಾಲಿಕ ಶುಚಿಗೊಳಿಸುವಿಕೆ ಮತ್ತು ದಿನನಿತ್ಯದ ನಿರ್ವಹಣೆಯನ್ನು ಸಹ ಆಡಳಿತ ನಿರ್ಲಕ್ಷಿಸಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ನಯಿನಿ ಅನುರಾಗ್ ರೆಡ್ಡಿ ಎಂಬ ಬಳಕೆದಾರರ ಟ್ವೀಟ್ ಅನ್ನು ಕೆಟಿಆರ್ ಹಂಚಿಕೊಂಡು, ನೇರ ಆರೋಪ ಎಸಗಿದ್ದಾರೆ. ವರದಿಗಳ ಪ್ರಕಾರ, ಸತ್ತ ಕೋತಿಗಳಿಂದ ತುಂಬಿದ್ದ ನೀರನ್ನೇ ಕಳೆದ ಕೆಲವು ದಿನಗಳಿಂದ ಯಾವುದೇ ತಪಾಸಣೆಯಿಲ್ಲದೆ ಜನರಿಗೆ ಕುಡಿಯಲು ಸರಬರಾಜು ಮಾಡಲಾಗಿದೆ. ನಿರ್ಲಕ್ಷ್ಯ ತೋರಿರುವ ಪುರಸಭೆ ಅಧಿಕಾರಿಗಳು ಟ್ಯಾಂಕ್​​​ನ ಓಪನ್ ಮಾಡಿದ್ದೇ ಮಂಗಗಳ ಸಾವಿಗೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ್ದಾರೆ.

ವರದಿಗಳ ಪ್ರಕಾರ, ನಂದಿಕೊಂಡ ಪುರಸಭೆಯ ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ನಿವಾಸಿಗಳಿಗೆ ಓವರ್‌ಹೆಡ್ ಟ್ಯಾಂಕ್‌ನಿಂದ ನೀರು ಒದಗಿಸುತ್ತಿದ್ದು, ಅದರೊಳಗೆ ಮಂಗಗಳ ಶವ ತೇಲುತ್ತಿರುವುದು ಇತ್ತೀಚೆಗೆ ಪತ್ತೆಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net