30 ಕೋಟಿ ಮೌಲ್ಯದ ಕಾಮಗಾರಿ ಆಮಿಷ; ಮಾಜಿ ಸಚಿವರ ಗನ್‌ಮ್ಯಾನ್ ವಿರುದ್ಧ ಕೇಸ್

Vidhanasoudha
Published on

ಬೆಂಗಳೂರು: ರಾಜ್ಯ ಸರ್ಕಾರದಿಂದ 30 ಕೋಟಿ ರೂ. ಮೌಲ್ಯದ ಕಾಮಗಾರಿ ಕೊಡಿಸುವುದಾಗಿ ಆಮಿಷವೊಡ್ಡಿ ಮಾಜಿ ಸಚಿವರ ಗನ್‌ಮ್ಯಾನ್ 6 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ.

ದಾವಣಗೆರೆ ಜಿಲ್ಲೆ ಶ್ರೀರಾಮನಗರದ ಎಚ್.ರಾಜು ನಾಯ್ಕ ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಗನ್‌ಮ್ಯಾನ್ ರಾಘವೇಂದ್ರ ಎಂಬಾತನ ವಿರುದ್ಧ ವಿಧಾನಸೌಧ ಪೊಲೀಸರು ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ಅನುದಾನ ಪಡೆಯಲು ಮಾಜಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಬಸಪ್ಪ ಆಚಾರ್ ಅವರನ್ನು ಭೇಟಿಗೆ ವಿಧಾನಸೌಧಕ್ಕೆ ತೆರಳಿದ್ದೆ. ಹಾಜಪ್ಪ ಅವರ ಗನ್‌ಮ್ಯಾನ್ ರಾಘವೇಂದ್ರ ಪರಿಚಯವಾಗಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿಯಲ್ಲಿ 30 ಕೋಟಿ ರೂ. ಕಾಮಗಾರಿ ನಡೆಸಲು ಅನುಧಾನ ಕೊಡಿಸುತ್ತೆನೆ.

ನನಗೆ ಶೇ.12 ಕಮಿಷನ್ ಕೊಡಬೇಕೆಂದು 10 ಲಕ್ಷ ರೂ.ಗೆ ಬೇಡಿಕೆ ಒಡ್ಡಿದ್ದರು. 2021ರ ಅಕ್ಟೋಬರ್‌ನಲ್ಲಿ 10 ಲಕ್ಷ ರೂ.ಅನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದೆ. ಯಾವುದೇ ಕಾಮಗಾರಿ ಕೊಡಿಸಲಿಲ್ಲ. ಹಣ ವಾಪಸ್ ಕೇಳಿದಾಗ 4 ಲಕ್ಷ ರೂ. ಕೊಟ್ಟಿದ್ದಾರೆ. ಉಳಿಕೆ ಹಣ ನೀಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ರಾಜು ನಾಯ್ಕ ಆರೋಪಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net