ಮಣ್ಣಿನಲ್ಲಿ ಹೂತಿದ್ದರೂ ಇನ್ನೂ ಹೊಳೆಯುತ್ತಿದೆ 3 ಸಾವಿರ ವರ್ಷ ಹಳೆ ಖಡ್ಗ!

sword2
Published on

ನವದೆಹಲಿ: 3,000 ವರ್ಷಗಳ ಹಿಂದೆ ತಯಾರಿಸಲಾಗಿದ್ದ ಕಂಚಿನ ಕತ್ತಿ ಇಂದಿಗೂ ಹೊಳೆಯುತ್ತಿದೆ ಎಂದರೆ ನಂಬಬಹುದೇ? ವ್ಯವಸ್ಥಿತವಾಗಿ ಸಂರಕ್ಷಿಸಿಟ್ಟರೆ ಒಂದು ಕಥೆ. ಈ ಕತ್ತಿಯನ್ನು ಅಗೆದು ತೆಗೆಯಲಾಗಿದ್ದು ಇನ್ನೂ ಸುರಕ್ಷಿತವಾಗಿದೆ. ಅದು ಇನ್ನೂ ಹೊಳೆಯುತ್ತಿದೆ. ಈ ಖಡ್ಗವನ್ನು ಜರ್ಮನಿಯಲ್ಲಿ ಪತ್ತೆಹಚ್ಚಲಾಗಿದೆ.

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗಾಗಿ ಬವೇರಿಯಾದ ರಾಜ್ಯ ಕಚೇರಿ ಹೇಳುವಂತೆ ಈ ಕತ್ತಿಯು 14 ನೇ ಶತಮಾನಕ್ಕೂ (ಕಂಚಿನ ಯುಗದ ಮಧ್ಯಭಾಗ) ಹಳೆಯದು ಎಂದು ನಂಬಲಾಗಿದೆ. ಕಳೆದ ವಾರ ದಕ್ಷಿಣದ ಜರ್ಮನಿಯ ನ್ಯೂರೆಂಬರ್ಗ್ ಮತ್ತು ಸ್ಟಟ್‌ಗಾರ್ಟ್ ನಡುವಿನ ನೋರ್ಡ್ಲಿಂಗನ್‌ನಲ್ಲಿ ಉತ್ಖನನದ ಸಮಯದಲ್ಲಿ ಈ ಕತ್ತಿ ಲಭ್ಯವಾಗಿದೆ.

ಈ ಅವಧಿಯ ಖಡ್ಗಗಳು ಸಿಗುವುದೇ ಅಪರೂಪದ ಸಂಗತಿ. ಅದರಲ್ಲೂ ಅದು ಇನ್ನೂ ಹೊಳೆಯುತ್ತಿರುವುದು ಇನ್ನೂ ಅಪರೂಪದ ಸಂಗತಿ. ಅವು 19ನೇ ಶತಮಾನದಲ್ಲಿ ತೆರೆಯಲಾದ ಸಮಾಧಿಗಳಿಂದ ಲಭ್ಯವಾಗಿದೆ ಎಂದು ಕಚೇರಿ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net