ದಾಖಲೆ ಇಲ್ಲದ 3 ಲಕ್ಷ ರೂ. ವಶ

21-GPT-2
ಕೇರಳ ಸುಲ್ತಾನ್ ಭತ್ತೇರಿ ರಸ್ತೆಯ ಮದ್ದೂರು ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿರುವುದು.
Published on

ಗುಂಡ್ಲುಪೇಟೆ : ಕೇರಳದಿಂದ ದಾಖಲೆಯಿಲ್ಲದೆ ಸಾಗಣೆ ಮಾಡುತ್ತಿದ್ದ 3 ಲಕ್ಷ ರೂ.ಗಳಿಗೂ ಹೆಚ್ಚಿನ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳ ಸುಲ್ತಾನ್ ಭತ್ತೇರಿ ರಸ್ತೆಯ ಮದ್ದೂರು ಚೆಕ್‌ಪೋಸ್ಟ್‌ನಲ್ಲಿ ಪಟ್ಟಣ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ನೇತೃತ್ವದಲ್ಲಿ ಪೊಲೀಸರು ತಪಾಸಣೆ ಕಾರ್ಯ ಕೈಗೊಂಡಿದ್ದರು. ಈ ವೇಳೆ ಲಾರಿಯ ಚಾಲಕ ಹ್ಯಾರೀಸ್ ಅವರಿಂದ 97 ಸಾವಿರ, ಪಿಕಪ್ ಚಾಲಕ ಜಂಷೀರ್ ಅವರಿಂದ 1 ಲಕ್ಷದ 17 ಸಾವಿರ ರೂ., ಕಾರಿನಲ್ಲಿ ಬರುತ್ತಿದ್ದ ಜೋಷ್ ಕೈನಾಂಡಿ ಎಂಬುವರಿಂದ 1 ಲಕ್ಷ ರೂ.ನಗದನ್ನು ವಶಕ್ಕೆ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net