ದರ್ಶನ್ ಬಂದ್ದಿದಕ್ಕೆ 3 ಲಕ್ಷ ರೂ. ಭದ್ರತಾ ಶುಲ್ಕ ಕಟ್ಟಿದ ವಾಮನ ಚಿತ್ರತಂಡ

Darshan
Published on

ಬೆಂಗಳೂರು: ವಾಮನ ಚಿತ್ರ ಫ್ರಿಮಿಯರ್ ಶೋಗೆ ನಟ ದರ್ಶನ್ ಆಗಮಿಸುವ ಮುನ್ನ ಕೆ.ಪಿ ಅಗ್ರಹಾರ ಪೊಲೀಸರು ಸಿಸಿಮಾ ತಂಡದಿಂದ ಲಕ್ಷಾಂತರ ರೂ. ಭದ್ರತಾ ಶುಲ್ಕವನ್ನು ಕಟ್ಟಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ತೆಲಂಗಾಣದಲ್ಲಿ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ-೨ ಚಿತ್ರ ಬಿಡುಗಡೆಯ ವೇಳೆ ನಡೆದ ಕಾಲ್ತುಳಿತ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಪೊಲೀಸರು ಭದ್ರತಾ ಶುಲ್ಕವನ್ನು ಕಟ್ಟಿಸಿಕೊಂಡು ನಟ ದರ್ಶನ್‌ಗೆ ಭದ್ರತೆ ನೀಡಿದ್ದಾರೆ.

ಸ್ಟಾರ್ ನಟರು ಸಿನಿಮಾ ವೀಕ್ಷಣೆಗೆ ಬಂದಾಗ ಪೊಲೀಸ್ ಭದ್ರತೆ ಪಡೆಯುವುದು ಕಡ್ಡಾಯವಾಗಿದ್ದು, ಪೊಲೀಸ್ ಸೆಕ್ಯೂರಿಟಿ ಪಡೆಯಬೇಕೆಂದರೆ ಸಿನಿಮಾ ತಂಡದವರು ಭದ್ರತಾ ಶುಲ್ಕ ಕಟ್ಟಬೇಕಾಗುತ್ತದೆ. ನಟ ಧನ್ವೀರ್ ಅಭಿನಯದ ವಾಮನ ಚಿತ್ರದ ಪ್ರೀಮಿಯರ್ ಶೋವನ್ನು ಏ.೯ ರಂದು ಜಿಟಿ ಮಾಲ್ ನಲ್ಲಿ ಆಯೋಜಿಸಲಾಗಿತ್ತು. ಚಿತ್ರ ವೀಕ್ಷಣೆಗೆ ನಟರಾದ ದರ್ಶನ್, ಚಿಕ್ಕಣ್ಣ ಬಂದಿದ್ದರು. ನಟ ದರ್ಶನ್ ಆಗಮನದ ಹಿನ್ನೆಲೆಯಲ್ಲಿ ಚಿತ್ರತಂಡ ಕೆ.ಪಿ ಅಗ್ರಹಾರ ಪೊಲೀಸರಿಂದ ಭದ್ರತೆಗೆ ಮನವಿ ಮಾಡಿದ್ದರು. ನಮ್ಮ ಬಾಡಿ ಗಾಡ್ಸ್‌ಗಳು ಇರುತ್ತಾರೆ, ಹೀಗಾಗಿ ಕೇವಲ ನಾಲ್ಕೈದು ಮಂದಿ ಪೊಲೀಸರ ಭದ್ರತೆ ಕೊಡಿ ಅಂತ ಮನವಿ ಮಾಡಿದ್ದರು. ಯಾರೆಲ್ಲ ಚಿತ್ರ ವೀಕ್ಷಣೆಗೆ ಬರುತ್ತಾರೆ ಅಂತಾ ಪೊಲೀಸರು ಪ್ರಶ್ನೆ ಮಾಡಿದ್ದಾಗ ದರ್ಶನ್ ಬರುವ ವಿಚಾರ ತಿಳಿಸಿದ್ದರು. ದರ್ಶನ್ ಬರುವುದರಿಂದ ಅಭಿಮಾನಿಗಳು ಹೆಚ್ಚಾಗಿ ಬರುತ್ತಾರೆ, ಆ ವೇಳೆ ಅಹಿತಕರ ಘಟನೆಯಾದರೆ ಯಾರು ಹೊಣೆಯಾಗುತ್ತಾರೆ? ಹೀಗಾಗಿ ಶುಲ್ಕ ಕಟ್ಟಿ ಹೆಚ್ಚುವರಿ ಬಂದೋ ಬಸ್ತ್ ಮಾಡಿಕೊಳ್ಳಿ ಎಂದು ಸಹಲಹೆ ನೀಡಿದ್ದರು. ಡಿಸಿಪಿ ಕಚೇರಿಯಲ್ಲಿ ಶುಲ್ಕ ಪಾವತಿಸಿದ ಹಿನ್ನೆಲೆಯಲ್ಲಿ ೪೦ ಮಂದಿ ಪೊಲೀಸರು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು ಇದಕ್ಕಾಗಿ ಚಿತ್ರತಂಡದಿಂದ ಪೊಲೀಸರು ೩.೦೪ ಲಕ್ಷ ರೂ. ಭದ್ರತಾ ಶುಲ್ಕ ಕಟ್ಟಿಸಿಕೊಂಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net