ಕಳ್ಳರ ಕೈಚಳಕ, 3 ಲಕ್ಷ ಮೌಲ್ಯದ ಸಿಗರೇಟ್ ಪ್ಯಾಕ್ ಖತಂ

pic theft
Published on

ಹೈದ್ರಾಬಾದ್: ಖತರ್ನಾಕ್ ಕಳ್ಳರಿಬ್ಬರು ಮೂರು ಲಕ್ಷ ರೂ. ಮೌಲ್ಯದ ಸಿಗರೇಟ್​​ ಪ್ಯಾಕ್​ಗಳನ್ನು ಕಿರಾಣಿ ಅಂಗಡಿಯಿಂದ ಕಳ್ಳತನ ಮಾಡಿರುವ ಘಟನೆ ಮಾಧುರಿ ನಗರದಲ್ಲಿ ನಡೆದಿದೆ. ಕಳ್ಳತನದ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಭಾನುವಾರ ಸಂಜೆ 5:30ರ ಸುಮಾರಿಗೆ ರಾಜರಾಜೇಶ್ವರಿ ಹೆಸರಿನ ಅಂಗಡಿಯ ಶೆಟ್ಟರ್ ಮುರಿದು ಒಳ ನುಗ್ಗಿದ ಕಳ್ಳರು, ಸುಮಾರು ಮೂರು ಲಕ್ಷ ರೂ. ಮೌಲ್ಯದ ಸಿಗರೇಟ್​​ ಪ್ಯಾಕ್​​ಗಳನ್ನು ಎಗರಿಸಿದ್ದಾರೆ.

ಮೂಲಗಳ ಪ್ರಕಾರ, ಕಳ್ಳರು ಕೆಲ ಗಂಟೆಗಳ ಮೊದಲು ಈ ಅಂಗಡಿಗೆ ಬಂದಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಈ ಸಂಬಂಧ ಆರ್​ಜಿಎಐ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net